Cine World
ಪಾಕಿಸ್ತಾನಿ ನಟ ಡ್ಯಾನಿಶ್ ತೈಮೂರ್ ಬಬಹುಪತ್ನಿತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಗಾಗಿ ಅವರು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ.
ಡ್ಯಾನಿಶ್ ತೈಮೂರ್ ಟಿವಿಯಲ್ಲಿ 'ಮೆಹಫಿಲ್-ಎ-ರಂಜಾನ್' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇತ್ತೀಚೆಗೆ ಅವರ ಪತ್ನಿ ಆಯೆಜಾ ಖಾನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಚರ್ಚೆ ನಡೆಯಿತು.
ಡ್ಯಾನಿಶ್ ತೈಮೂರ್ ಅವರು ನಾಲ್ಕು ಮದುವೆಗಳನ್ನು ಆಗಲು ನನಗೆ ಅನುಮತಿ ಇದೆ ಎಂದು ಹೇಳಿದರು. ಈ ವೇಳೆ ಪತ್ನಿ ತನ್ನ ಮುಂದೆ ಕುಳಿತಿದ್ದಾಳೆ ಎಂಬುದನ್ನು ಮರೆತರು.
ಡ್ಯಾನಿಶ್ ತೈಮೂರ್, 'ನಾನು ಎಲ್ಲರ ಮುಂದೆ ಹೇಳುತ್ತಿದ್ದೇನೆ. ನನಗೆ 4 ಮದುವೆಗಳನ್ನು ಆಗಲು ಅನುಮತಿ ಇದೆ... ನಾನು ಮಾಡುತ್ತಿಲ್ಲ, ಅದು ಬೇರೆ ವಿಷಯ. ಆದರೆ ಈ ಅನುಮತಿಯನ್ನು ನನಗೆ ಅಲ್ಲಾಹ್ ನೀಡಿದ್ದಾನೆ.
ಮುಂದುವರೆದು ಡ್ಯಾನಿಶ್ ತೈಮೂರ್ ಪತ್ನಿ ಆಯೆಜಾ ಕಡೆಗೆ ಕೈ ತೋರಿಸಿ, "ಇವರು ನನ್ನ ಪ್ರೀತಿ. ಅವರಿಗಾಗಿ ನನಗೆ ಗೌರವವಿದೆ, ನಾನು ಸದ್ಯಕ್ಕೆ ಅವರೊಂದಿಗೆ ಜೀವನ ಕಳೆಯಲು ಬಯಸುತ್ತೇನೆ.
ಡ್ಯಾನಿಶ್ ತೈಮೂರ್ ಅವರ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಟರ್ನೆಟ್ ಬಳಕೆದಾರರು ಅವರ ಈ ಹೇಳಿಕೆಗಾಗಿ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಡ್ಯಾನಿಶ್ ತೈಮೂರ್ಜನಪ್ರಿಯ ನಟ. ಅವರು ಅನೇಕ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2014 ರಲ್ಲಿ ಆಯೆಜಾ ಖಾನ್ ಅವರನ್ನು ವಿವಾಹವಾದರು.