ಕಠಿಣ ಪರೀಕ್ಷೆ ಎಂದು ಪರಿಗಣಿಸುವ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡೋರು ಯಾರು?
ಯುಪಿಎಸ್ಸಿ ಸಿವಿಲ್ ಸೇವಾ ಪರೀಕ್ಷೆಯನ್ನು ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಸವಾಲಿನ ಪರೀಕ್ಷೆ. ಇದನ್ನು ಪಾಸು ಮಾಡಲು ಹಲವು ವರ್ಷಗಳ ಶ್ರಮ, ತಾಳ್ಮೆ ಮತ್ತು ಸಮರ್ಪಣೆ ಅಗತ್ಯ.
2022-23ರ ವಾರ್ಷಿಕ ವರದಿ ಪ್ರಕಾರ, ತಮ್ಮ ಮೊದಲ ಪ್ರಯತ್ನದಲ್ಲಿ ಕೇವಲ 8% ಅಭ್ಯರ್ಥಿಗಳು ಮಾತ್ರ ಯಶಸ್ಸು ಪಡೆಯುತ್ತಾರೆ. ಭಾರತೀಯ ಆಡಳಿತ ಸೇವೆ ಆಯ್ಕೆಯಾಗುತ್ತಾರೆ.
ಸಾಮಾನ್ಯವಾಗಿ ಮೂರು ಬಾರಿ ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ. 2022-23 ರಲ್ಲಿ ಮೂರನೇ ಪ್ರಯತ್ನಕ್ಕೆ 22.5% ಅಭ್ಯರ್ಥಿಗಳು ಯಶಸ್ವಿಯಾದರು. ಅದರಲ್ಲಿ 20.3% ಪುರುಷರು ಮತ್ತು 28.4% ಮಹಿಳೆಯರು.
ಮೂರನೇ ಪ್ರಯತ್ನದ ನಂತರ UPSC ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ತಾಳ್ಮೆ ಕಳೆದುಕೊಳ್ಳುತ್ತಾರೆ. ಶೇ.11 ಮಂದಿ ಮಾತ್ರ 6ನೇ ಯತ್ನದ ತನಕ ಪರೀಕ್ಷೆ ಬರೆಯುತ್ತಾರೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟು 6 ಪ್ರಯತ್ನಗಳು ಸಿಗುತ್ತವೆ, ಆದರೆ PwD (ಅಂಗವಿಕಲ ವ್ಯಕ್ತಿ) ವರ್ಗದ ಅಭ್ಯರ್ಥಿಗಳಿಗೆ 9 ಪ್ರಯತ್ನಗಳು ಸಿಗುತ್ತವೆ.
ಸಿವಿಲ್ ಸೇವಾ ಪರೀಕ್ಷೆಯಲ್ಲಿ ಹೆಚ್ಚು ಯಶಸ್ವಿ ಅಭ್ಯರ್ಥಿಗಳ ವಯಸ್ಸು 24 ರಿಂದ 26 ವರ್ಷಗಳು. ಈ ವಯೋಮಾನದ ಪುರುಷರ ಯಶಸ್ಸಿನ ಪ್ರಮಾಣ 29.4% ಮತ್ತು ಮಹಿಳೆಯರ ಯಶಸ್ಸಿನ ಪ್ರಮಾಣ 33.3%.
30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಗುಂಪಿನಲ್ಲಿ ಪುರುಷರ ಯಶಸ್ಸಿನ ಪ್ರಮಾಣ 14.6% ಮತ್ತು ಮಹಿಳೆಯರ ಯಶಸ್ಸಿನ ಪ್ರಮಾಣ 12.5%, ಇದು ಯುವಕರಿಗಿಂತ ಕಡಿಮೆ.
ಸಿವಿಲ್ ಸೇವಾ ಪರೀಕ್ಷೆಯ ಕನಸನ್ನು ನನಸಾಗಿಸಲು ಕೇವಲ ಶ್ರಮ ಮತ್ತು ಉತ್ಸಾಹವಷ್ಟೇ ಅಲ್ಲ, ತಾಳ್ಮೆಯೂ ಮುಖ್ಯ. ಮೂರನೇ ಪ್ರಯತ್ನದ ನಂತರ ಹೆಚ್ಚಿನ ಅಭ್ಯರ್ಥಿಗಳು ಪ್ರಯತ್ನ ಬಿಟ್ಟು ಬಿಡುತ್ತಾರೆ.