BUSINESS

70 ಗಂಟೆ ಕೆಲಸ, ಆದರೆ ವೇತನ ಹೆಚ್ಚಳವಿಲ್ಲ: ಐಟಿ ಕಂಪನಿ

ಇನ್ಫೋಸಿಸ್ ಉದ್ಯೋಗಿಗಳ ವೇತನ ಹೆಚ್ಚಳವಿಲ್ಲ

ವಾರದಲ್ಲಿ 70ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣ ಮೂರ್ತಿ ಕಂಪನಿ ಈಗ ಉದ್ಯೋಗಿಗಳ ವೇತನ ಹೆಚ್ಚಳದ ವಿಷಯದಲ್ಲಿ ಹಿಂದೆ ಸರಿಯುತ್ತಿದೆ.

ಮೂರನೇ ತ್ರೈಮಾಸಿಕದಲ್ಲೂ ಹೈಕ್‌ ಇದ್ದಿರಲಿಲ್ಲ

ಇನ್ಫೋಸಿಸ್ ಇತ್ತೀಚೆಗೆ ಉದ್ಯೋಗಿಗಳ ವೇತನ ಹೆಚ್ಚಳದ ಪ್ರಸ್ತಾಪವನ್ನು ಮುಂದೂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಏನಾದರೂ ಆಗಬಹುದು ಎನ್ನುವ  ನಿರೀಕ್ಷೆ ಇತ್ತು.

2023ರ ನವೆಂಬರ್‌ನಲ್ಲಿ ಕೊನೇ ಹೈಕ್‌

ಇನ್ಫೋಸಿಸ್‌ನಲ್ಲಿ ಕೊನೆಯದಾಗಿ ನವೆಂಬರ್ 2023 ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವಾಗಿತ್ತು. ಅಂದರೆ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅಲ್ಲಿ ವೇತನ ಹೆಚ್ಚಳವಾಗಿಲ್ಲ.

ವೇತನ ಹೆಚ್ಚಳ ಮುಂದೂಡಿದ್ದೇಕೆ?

ವರದಿಗಳ ಪ್ರಕಾರ, ಜಾಗತಿಕ ಬೇಡಿಕೆಯಲ್ಲಿ ಅನಿಶ್ಚಿತತೆ ಮತ್ತು ಐಟಿ ಸೇವೆಗಳ ವೆಚ್ಚದಲ್ಲಿನ ಕಡಿತದಿಂದಾಗಿ ಕಂಪನಿಯು ವೇತನ ಹೆಚ್ಚಳವನ್ನು ಮುಂದೂಡಿದೆ.

70 ಗಂಟೆ ಕೆಲಸಕ್ಕೆ ನಾರಾಯಣ ಮೂರ್ತಿ ವಕಾಲತ್ತು

ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ, ಭಾರತದಲ್ಲಿ ಉದ್ಯೋಗಿಗಳು ವಾರಕ್ಕೆ 70ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಆದರೆ, ಉದ್ಯೋಗಿಗಳ ವೇತನ ಹೆಚ್ಚಳದ ವಿಷಯ ಬಂದಾಗ ಕಂಪನಿ ಹಿಂದೆ ಸರಿದಿದೆ.

ಕಠಿಣ ಪರಿಶ್ರಮ ಅಗತ್ಯ ಎಂದಿದ್ದ ನಾರಾಯಣ ಮೂರ್ತಿ

ಕಠಿಣ ಪರಿಶ್ರಮವಿಲ್ಲದೆ ಭಾರತವನ್ನು ನಂ. 1 ಸ್ಥಾನಕ್ಕೆ ತರಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದರು. ಆದ್ದರಿಂದ ಯುವಕರು ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದ್ದರು.

ನಾರಾಯಣ ಮೂರ್ತಿ ಮಾತಿಗೆ ಹಲವರ ಆಕ್ಷೇಪ

ಆದರೆ, ನಾರಾಯಣ ಮೂರ್ತಿ ಅವರ ಈ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅವರ ಮಾತನ್ನು ಬೆಂಬಲಿಸಿದ್ದರು.

2ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ಗೆ ₹6506 ಕೋಟಿ ಲಾಭ

ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಇನ್ಫೋಸಿಸ್‌ನ ನಿವ್ವಳ ಲಾಭ 2.2% ಹೆಚ್ಚಾಗಿ ₹6506 ಕೋಟಿಗೆ ತಲುಪಿದೆ. ಆದರೆ, ಇದು ನಿರೀಕ್ಷೆಗಿಂತ ಕಡಿಮೆ.

ಭಾರತ ಕಂಡ ಶ್ರೇಷ್ಠ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಆಸ್ತಿ ವಿವರ..

ಮಕರ ಸಂಕ್ರಾತಿಗೂ ಮುನ್ನ ಇಳಿಕೆಯಾಯ್ತು ಚಿನ್ನ,ಬೆಳ್ಳಿ ದರ

December GST: ಕರ್ನಾಟಕ ಕಟ್ಟಿರುವ ಜಿಎಸ್‌ಟಿ ಎಷ್ಟು?

ಕೇವಲ 45,850ಕ್ಕೆ ಐಫೋನ್ 16 ಪ್ಲಸ್, ಭಾರಿ ಡಿಸ್ಕೌಂಟ್!