Bikes
ಬೆಳಗ್ಗೆ ಎದ್ದು ಅವಸರದಲ್ಲಿ ಆಫೀಸ್‌ಗೆ, ಕೆಲಸಕ್ಕೆ ಹೊರಡೋರಿಗೆ ಚಳಿಗಾಲದಲ್ಲಿ ಇದೊಂದು ಸಮಸ್ಯೆ, ಎಷ್ಟೇ ಪ್ರಯತ್ನಿಸಿದರೂ ಬೈಕ್ ಸ್ಟಾರ್ಟ್ ಆಗೋದಿಲ್ಲ. ಯಾಕೆ ಬೇಗ ಸ್ಟಾರ್ಟ್ ಆಗೊಲ್ಲ ಅನ್ನೋದು ತಿಳ್ಕೊಳ್ಳೋಣ..
ಬೈಕ್‌ನಲ್ಲಿ ಎಂಜಿನ್ ಆಯಿಲ್ ಬಗ್ಗೆ ಜಾಗರೂಕರಾಗಿರಬೇಕು. ಹಳೆಯ ಎಂಜಿನ್ ಆಯಿಲ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಎಂಜಿನ್ ಆಯಿಲ್ ಅನ್ನು ಬದಲಾಯಿಸಬೇಕು. ಉತ್ತಮ ಗುಣಮಟ್ಟದ ಆಯಿಲ್ ಅನ್ನು ಮಾತ್ರ ಬಳಸಬೇಕು.
ಚಳಿಗಾಲದಲ್ಲಿ ಬೆಳಗ್ಗೆ ಬೈಕ್ ಸ್ಟಾರ್ಟ್ ಮಾಡಲು ಸೆಲ್ಫ್ ಸ್ಟಾರ್ಟ್ ಬಳಸಬಾರದು, ಕಿಕ್ ಮಾಡುವುದೇ ಉತ್ತಮ. ವಿಶೇಷವಾಗಿ ಬೆಳಿಗ್ಗೆ ಮೊದಲ ಬಾರಿಗೆ ಬೈಕ್ ಸ್ಟಾರ್ಟ್ ಮಾಡುವಾಗ ಕಿಕ್ಕರ್ ಬಳಸಬೇಕು.
ಬೈಕ್ ಸ್ಟಾರ್ಟ್ ಆಗಲು ಕಷ್ಟವಾಗುತ್ತಿದ್ದರೆ ಚೋಕ್ ಬಳಸಬೇಕು. ಹೀಗೆ ಮಾಡುವುದರಿಂದ ಎಂಜಿನ್‌ಗೆ ಆಯಿಲ್ ಹೋಗಲು ಸಹಾಯವಾಗುತ್ತದೆ. ಇದರಿಂದ ಬೈಕ್ ಸುಲಭವಾಗಿ ಸ್ಟಾರ್ಟ್ ಆಗುತ್ತದೆ.
ಚಳಿಗಾಲದಲ್ಲಿ ಬೆಳಿಗ್ಗೆ ಬೈಕ್ ಸ್ಟಾರ್ಟ್ ಮಾಡಿದ ಕೂಡಲೇ ಬೈಕ್ ಓಡಿಸಬಾರದು. ಸ್ವಲ್ಪ ಹೊತ್ತು ರೇಸ್ ಕೊಡಬೇಕು. ಇಲ್ಲದಿದ್ದರೆ ಬೈಕ್ ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇರುತ್ತದೆ.
ಬೈಕ್ ಅಗತ್ಯವಿಲ್ಲದಿದ್ದರೂ ಆಗಾಗ್ಗೆ ಆನ್ ಮಾಡಬೇಕು. ಹಲವು ದಿನಗಳ ಕಾಲ ಬಳಸದೆ ಇಟ್ಟರೆ ಆನ್ ಮಾಡುವಾಗ ಸಮಸ್ಯೆಗಳು ಬರುತ್ತವೆ.
ಸ್ಪಾರ್ಕ್ ಪ್ಲಗ್‌ಗಳನ್ನು ಕ್ಲೀನ್ ಆಗಿಡಿ. ಕಾರ್ಬನ್ ಸಂಗ್ರಹವಾದರೆ ಬೈಕ್ ಬೇಗ ಸ್ಟಾರ್ಟ್ ಆಗುವುದಿಲ್ಲ. ಆದ್ದರಿಂದ ಸ್ಪಾರ್ಕ್ ಪ್ಲಗ್ ಅನ್ನು ಆಗಾಗ್ಗೆ ಪರಿಶೀಲಿಸಬೇಕು.