Astrology
ಪರಿಸರ, ಆರೋಗ್ಯ, ನೈಸರ್ಗಿಕ ಅವಘಡದ ಸೂಚನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಶ್ವಾನಗಳು ರಾತ್ರಿಯಲ್ಲಿ ಬೊಗಳುತ್ತವೆ. ಆದರೆ ಇದೊಂದೇ ಕಾರಣವಲ್ಲ ಏನೆಂಬುದು ತಿಳಿಯೋಣ.
ರಾತ್ರಿ ನಾಯಿಗಳು ಅಳುತ್ತಾ ಅರಚುತ್ತವೆ. ಹಲವರು ಇದನ್ನು ಅಪಶಕುನವೆಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ನಾಯಿಗಳನ್ನು ಅಲ್ಲಿಂದ ಓಡಿಸುತ್ತಾರೆ.
ನಾಯಿಗಳು ರಾತ್ರಿ ಸಮಯದಲ್ಲಿ ಬೊಗಳಿದರೆ ಯಾರೋ ಸಾಯಲಿದ್ದಾರೆ ಅಥವಾ ದೆವ್ವಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ನಂಬುತ್ತಾರೆ. ಜ್ಯೋತಿಷಿಗಳು ಕೂಡ ಇದನ್ನೇ ಹೇಳುತ್ತಾರೆ.
ಮನುಷ್ಯನಿಗೆ ಕಾಣದ ಅದೃಶ್ಯ ಶಕ್ತಿಗಳು ಕಾಣಿಸಿಕೊಂಡಾಗ ನಾಯಿಗಳು ವಿಚಿತ್ರವಾಗಿ ಅರಚುತ್ತವೆ ಎನ್ನುತ್ತಾರೆ.
ಪಶುವೈದ್ಯರು ಇದಕ್ಕೆ ಭಿನ್ನವಾದ ವಾದವನ್ನು ಮಂಡಿಸುತ್ತಾರೆ. ನಾಯಿಗಳು ಅಳುವುದಕ್ಕೆ ಭಾವನಾತ್ಮಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.
ಯಾವುದೇ ಗಾಯ ಅಥವಾ ಯಾವುದೇ ನೋವಿನಿಂದ ಬಳಲುತ್ತಿರುವಾಗ ನಾಯಿಗಳು ಅಳುತ್ತವೆ ಎಂದು ವೈದ್ಯರು ಹೇಳುತ್ತಾರೆ. ಮನೆಯಲ್ಲಿ ಯಜಮಾನನ ಗಮನ ಸೆಳೆಯಲು ಹೀಗೆ ಅರಚುತ್ತವೆ ಎನ್ನುತ್ತಾರೆ.
ನಾಯಿಗಳು ಒಂಟಿತನ ಅನುಭವಿಸಿದಾಗಲೂ ಹೀಗೆ ಅರಚುತ್ತವೆ ಎಂದು ತಜ್ಞರು ಹೇಳುತ್ತಾರೆ. ವಿಜ್ಞಾನದ ಪ್ರಕಾರ ನಾಯಿಗಳಿಗೆ ದೆವ್ವಗಳು ಕಾಣಿಸುತ್ತವೆ ಎಂಬುದರಲ್ಲಿ ಸತ್ಯವಿಲ್ಲ ಎನ್ನುತ್ತಾರೆ.
ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?
ಚಾಣಕ್ಯ ನೀತಿ: ಯಾವುದೇ ಕೆಲಸ ಆರಂಭಿಸೋ ಮುನ್ನ 3 ಪ್ರಶ್ನೆ ಕೇಳಿ
ಚಾಣಕ್ಯ ನೀತಿ: ಈ 10 ಅವಕಾಶಗಳನ್ನು ಎಂದಿಗೂ ಬಿಡಬೇಡಿ
2025ರಲ್ಲಿ ಅದೃಷ್ಟ ಪಡೆಯಲು ಸರಳ ಮಾರ್ಗಗಳು