Astrology
ಸನಾತನ ಧರ್ಮದಲ್ಲಿ ಗುರುವಾರವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತೆ. ಈ ದಿನ ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಹೀಗಾಗಿ ಅನೇಕ ಜನರು ಗುರುವಾರ ಉಪವಾಸವನ್ನು ಆಚರಿಸುತ್ತಾರೆ.
ಗುರುವಾರಕ್ಕೆ ಸಂಬಂಧಿಸಿದ ಅನೇಕ ನಿಯಮಗಳನ್ನು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಅದನ್ನು ಇಂದಿಗೂ ಹಿಂದೂಗಳು ಅನುಸರಿಸುತ್ತಾರೆ.
ಗುರುವಾರ ಕೂದಲು ತೊಳೆಯುವುದು, ಕೂದಲು, ಗಡ್ಡ ಮತ್ತು ಉಗುರು ಕತ್ತರಿಸುವುದು, ಬಟ್ಟೆ ಒಗೆಯುವುದು, ಮನೆ ಒರೆಸುವುದು ಮಾಂಸ ಸೇವನೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಈ ದಿನ ಖಿಚಡಿ ತಿನ್ನಬಾರದೆಂಬ ನಂಬಿಕೆ.
ನಿಮಗಿದು ಸ್ವಲ್ಪ ವಿಚಿತ್ರವಾಗಿ ಅಥವಾ ಮೂಡನಂಬಿಕೆಯಂತೆ ಕಾಣಿಸಬಹುದು. ಆದರೆ ಅದರ ಕಾರಣ ಮತ್ತು ಅದರಿಂದಾಗುವ ಹಾನಿಯನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಕರಿಬೇವು ಸೇರಿಸಿ ಖಿಚಡಿ ಬೇಯಿಸುತ್ತಾರೆ, ಇದು ಶುಭವಲ್ಲ.
ಗುರುವಾರದಂದು ಹಳದಿ ಸೊಪ್ಪಿನ ಜೊತೆ ಖಿಚಡಿ ತಿನ್ನುವುದು ಜಾತಕದಲ್ಲಿ ಗುರು ಗ್ರಹವನ್ನು ದುರ್ಬಲಗೊಳಿಸುತ್ತದೆ. ಆರ್ಥಿಕ ಸ್ಥಿತಿಯು ದುರ್ಬಲಗೊಳ್ಳುತ್ತದೆ ಮತ್ತು ಸಂತೋಷ ಮತ್ತು ಶಾಂತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಕಿಚಡಿ ಜೊತೆಗೆ ಬಾಳೆಹಣ್ಣು ತಿನ್ನುವುದನ್ನು ಸಹ ನಿಷೇಧಿಸಲಾಗಿದೆ ಈ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.ಹಿಂದೂ ಧರ್ಮದ ಈ ನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ.