Asianet Suvarna News Asianet Suvarna News

ಬಂಕ್‌ನಲ್ಲಿ ಪೆಟ್ರೋಲ್ ಬದಲಿಗೆ ನೀರು, ವಾಹನ ಮಾಲೀಕರು ಕಂಗಾಲು!

ಪೆಟ್ರೋಲ್ ಹಾಕಿಸೋಕೆ ಹೋದ್ರೆ ಬಂಕ್ ಸಿಬ್ಬಂದಿ ಟ್ಯಾಂಕ್ ತುಂಬ ನೀರು ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ವಿಕಾಸ್ ಪೆಟ್ರೋಲ್ ಬಂಕ್‌ಗೆ ತೆರಳಿದ ವಾಹನ ಸವಾರರಿಗೆ ಶಾಕ್ ಶಾಕ್ ಮೇಲೆ ಎದುರಾಗಿದೆ.  ಪೆಟ್ರೋಲ್ ತುಂಬಿಸಿ ವಾಹನ ಸ್ಟಾರ್ಟ್ ಮಾಡೋಕೆ ಮುಂದಾದಾಗ ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಹಲವು ವಾಹನಗಳಿಗೆ ಇದೇ ರೀತಿ ಆದಾಗ ಜನರಿಗೆ ಪೆಟ್ರೋಲ್ ಗುಣಮಟ್ಟದ ಮೇಲೆ ಅನುಮಾನ ಬಂದಿದೆ. 

ಯಾದಗಿರಿ(ಜು.16): ಪೆಟ್ರೋಲ್ ಹಾಕಿಸೋಕೆ ಹೋದ್ರೆ ಬಂಕ್ ಸಿಬ್ಬಂದಿ ಟ್ಯಾಂಕ್ ತುಂಬ ನೀರು ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ವಿಕಾಸ್ ಪೆಟ್ರೋಲ್ ಬಂಕ್‌ಗೆ ತೆರಳಿದ ವಾಹನ ಸವಾರರಿಗೆ ಶಾಕ್ ಶಾಕ್ ಮೇಲೆ ಎದುರಾಗಿದೆ.  ಪೆಟ್ರೋಲ್ ತುಂಬಿಸಿ ವಾಹನ ಸ್ಟಾರ್ಟ್ ಮಾಡೋಕೆ ಮುಂದಾದಾಗ ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಹಲವು ವಾಹನಗಳಿಗೆ ಇದೇ ರೀತಿ ಆದಾಗ ಜನರಿಗೆ ಪೆಟ್ರೋಲ್ ಗುಣಮಟ್ಟದ ಮೇಲೆ ಅನುಮಾನ ಬಂದಿದೆ. 

ಹರಿವ ನೀರಿನಲ್ಲಿ ತೇಲಿ ಬಂದ ಕಾರು; ಕಾರಿನಲ್ಲಿದ್ದ ಇಬ್ಬರು ಬಚಾವ್!

ನಂತರ ಬಾಟಲಿಯಲ್ಲಿ ಪೆಟ್ರೋಲ್ ತೆಗೆದು ನೋಡಿದಾಗ ನೀರು ಇರೋದು ಸ್ಪಷ್ಟವಾಗಿತ್ತು. ನಿನ್ನೆ ಸುರಿದ ಮಳೆಯಿಂದಾಗಿ ಪೆಟ್ರೋಲ್ ಬಂಕ್ ಶೇಖರಣೆ ಘಟಕದೊಳಗೆ ನೀರು ತುಂಬಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ.  ತಪ್ಪು ಅರಿತ ಮಾಲೀಕ, ನೀರು ತುಂಬಿದ ಐವತ್ತಕ್ಕೂ ಹೆಚ್ಚು ಬೈಕ್‌ಗಳ ಮಾಲೀಕರಿಗೆ ಪೆಟ್ರೋಲ್ ಹಣ ವಾಪಾಸು ನೀಡಿದ್ದಾರೆ.  ಇಷ್ಟೇ ಅಲ್ಲ ಜೊತೆಗೆ ಕೆಟ್ಟು ನಿಂತಿರುವ ಬೈಕ್‌ಗಳ ರಿಪೇರಿ ಕೂಡಾ ಮಾಡಿಸಿದ್ದಾರೆ.
 

Video Top Stories