ಭರ್ಜರಿ ಸ್ಫೋಟಕ್ಕೆ ರಷ್ಯಾ ಸಿದ್ಧತೆ..ಪರಿಣಾಮ ಘೋರ: ಅಣುಬಾಂಬ್ ದಾಳಿಯಾದ್ರೆ ಜಗತ್ತೇ ಅಲ್ಲೋಲಕಲ್ಲೋಲ..!
ರಷ್ಯಾ ಉಕ್ರೇನ್ ಮೇಲೆ ಅಣುಬಾಂಬ್ ಹಾಕಿದ್ರೆ, ಭಾರತಕ್ಕೂ ಕಾವು ತಟ್ಟಲಿದೆ. ಎಲ್ಲಾ ದೇಶಗಳಿಗೂ ಸಂಕಷ್ಟ ತಪ್ಪಿದ್ದಲ್ಲ. ಯಾಕೆಂದ್ರೆ ಇಡೀ ಜಗತ್ತೇ ಇಂಟರ್ ಲಿಂಕ್ ಆಗಿದೆ. ಒಂದು ಯುದ್ಧ ನಡೆಯೋದು ದೊಡ್ಡದಲ್ಲ, ಆದ್ರೆ ಅದರ ಪರಿಣಾಮ ಇದೆಯಲ್ಲಾ, ಘೋರಾತಿಘೋರ.
ರಷ್ಯಾ -ಉಕ್ರೇನ್ ಮೇಲೆ ಸಾರಿರೋ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸ್ತಾ ಇಲ್ಲ. ಬರೋಬ್ಬರಿ 479 ದಿನಗಳ ಮಹಾ ಸಂಗ್ರಾಮ ಇನ್ನೇನು ಅಂತ್ಯವಾಗೋ ಲಕ್ಷಣ ಗೋಚರಿಸ್ತಾ ಇದೆ. ಆದ್ರೆ ಅದು ಭೀಕರ ಹಾದಿಯಲ್ಲಿ. ತಲೆ ತಗ್ಗಿಸಿ ಶರಣಾಗೋಕೆ ಉಕ್ರೇನ್ ಒಪ್ಪುತ್ತಲೇ ಇಲ್ಲಾ.ಕೊನೆಯ ರಕ್ತದ ಹನಿಯವರೆಗೂ ಹೋರಾಡ್ತಿವಿ ಅನ್ನೋ ಮಂತ್ರ ಪಠಿಸುತ್ತಾ ರಷ್ಯಾವನ್ನ ಎದುರಿಸೋಕೆ ಮುಂದಾಗಿದೆ. ಹೀಗಾಗಿಯೇ ಪುಟಿನ್ ಒಂದು ಮಹಾ ಅಸ್ತ್ರವನ್ನ ಪ್ರಯೋಗಿಸೋಕೆ ಮುಂದಾಗಿದ್ದಾರೆ. ಅದೇ ನ್ಯೂಕ್ಲಿಯರ್ ಅಟ್ಯಾಕ್. ಪುಟಿನ್ ಯುದ್ಧವನ್ನ ಗೆಲ್ಲದ ಹತಾಶೆಯಲ್ಲಿದ್ದಂತೆ ಕಾಣ್ತಿದ್ದಾರೆ, ಹೀಗಾಗಿ ತಮ್ಮ ಶಸ್ತ್ರಗಾರದ ಅತಿ ಭೀಕರ ಆಯುಧಕ್ಕೆ ಕೈ ಹಾಕಿದೆ. ಆದ್ರೆ ಈ ಯುದ್ಧವೇನಾದ್ರೂ ಅಣುಬಾಂಬಿನಲ್ಲಿ ಕೊನೆ ಆದ್ರೆ ಇಡೀ ಜಗತ್ತು ಸಂಕಷ್ಟದ ಕೂಪಕ್ಕೆ ಬೀಳೋದು ಸುಳ್ಳಲ್ಲ.
ಇದನ್ನೂ ವೀಕ್ಷಿಸಿ: Today Rashibhavishy: ಇಂದು ಮಣ್ಣೆತ್ತಿನ ಅಮಾವಾಸ್ಯೆ..ಈ ದಿನ ಏನು ಮಾಡಬೇಕು, ಮಾಡಬಾರದು..?