Modi Global Leader: ಮೋದಿಯೇ ಗ್ಲೋಬಲ್ ಬ್ರಾಂಡ್..! ಬೈಡನ್‌, ರಿಷಿ, ಟ್ರುಡೋ.. ದಾಟಿ ಮುನ್ನುಗ್ಗಿದ್ದು ಹೇಗೆ..?

ಮಾರ್ನಿಂಗ್ ಕನ್ಸಲ್ಟ್ ನಡೆಸಿದ್ದ ಜಾಗತಿಕ ಸಮೀಕ್ಷೆ..!
ದೊಡ್ಡ ದೇಶದ ನಾಯಕರ ಹಿಮ್ಮೆಟ್ಟಿಸಿದ ಮೋದಿ..!
ಟಾಪ್ 10 ನಾಯಕರಲ್ಲೂ ಇಲ್ಲಾ ರಿಷಿ ಸುನಕ್..!

First Published Feb 26, 2024, 10:08 AM IST | Last Updated Feb 26, 2024, 10:09 AM IST

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದ ನಾಯಕನಿಂದ ವಿಶ್ವನಾಯಕನಾಗಿ ಖ್ಯಾತಿಗಳಿಸಿ ತುಂಬಾ ಕಾಲವೇ ಆಗಿದೆ. ದಿನೇ ದಿನೇ ಮೋದಿ(Narendra Modi) ಅನ್ನೋ ಮಹಾನಾಯಕನ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗ್ತಾನೇ ಇದೆ. ಅಮೆರಿಕ(America) ಮೂಲದ ಒಂದು ಸರ್ವೇ ಸಂಸ್ಥೆ ನಡೆಸಿದ ಸಮೀಕ್ಷೆ(Suvery) ಕಂಡು ಜಗತ್ತಿನ ಬೇರೆ ಬೇರೆ ನಾಯಕರು ಹುಬ್ಬೇರಿಸಿದ್ದಾರೆ. ದೊಡ್ಡಣ್ಣ ಚಿಕ್ಕಣ್ಣ ಎಲ್ಲಾರೂ ಕೂಡ ಭಾರತದ ಪ್ರಧಾನಿ ಕಂಡು ಬೆರಗಾಗಿದ್ದಾರೆ. ನರೇಂದ್ರ ದಾಮೋದರ ದಾಸ್ ಮೋದಿ..ವಿಶ್ವನಾಯಕ.. ಇದನ್ನ ಪದೇ ಪದೇ ಮೋದಿ ಸಾಬೀತು ಮಾಡ್ತಾನೇ ಇದಾರೆ. ಜಗತ್ತಿನಲ್ಲಿ ಯಾವ ದೇಶದ ಯಾವ ನಾಯಕರಿಗೂ ಸಿಗದ ಜಾಗತಿಕ ಮನ್ನಣೆ ಮೋದಿಗೆ ಸಿಕ್ತಾ ಇದೆ. ಮೋದಿಯನ್ನ ನಮ್ಮ ದೇಶ ಮಾತ್ರವಲ್ಲ, ಬೇರೆ  ಬೇರೆ ದೇಶದವರು ನೋಡುವ ಸತ್ಕರಿಸುವ ರೀತಿಯೇ ಬದಲಾಗಿದೆ. ಮೋದಿ ಭಾರತಕ್ಕೆ ಸೀಮಿತವಾಗಿಲ್ಲ. ಮೋದಿ ಮಾತನ್ನ ಜಗತ್ತು ಆಲಿಸುತ್ತೆ. ಮೋದಿ ನಡೆಯನ್ನ  ಜಗತ್ತು ಗಮನಿಸುತ್ತೆ. ಮೋದಿಯ ಒಂದು ನಿರ್ಧಾರಕ್ಕೆ ಬಂದರೆ ಎಲ್ಲಾ ಆಯಾಮಗಳಿಂದ ಆಲೋಚಿಸುತ್ತೆ. ಇದೇ ಕಾರಣಕ್ಕೆ ಮೋದಿಯವರನ್ನ ಗ್ಲೋಬಲ್ ಲೀಡರ್ ಅಂತಿರೋದು. ಮೋದಿ ಪರವಾಗಿ 77 ಪರ್ಸಂಟ್ ಜನರು ಮೋದಿ ನಾಯಕತ್ವವನ್ನ ಒಪ್ಪಿದ್ದಾರೆ. ಇದೊಂದು ಸರ್ವೇ ಜಾಗತಿಕವಾಗಿ ನಡೆದಿದೆ. ಅಮೆರಿಕಾ ಮೂಲದ ಮಾರ್ನಿಂಗ್ ಕನ್ಸಲ್ಟ್ ಸರ್ವೇ(Morning Consult Political Intelligence ) ಮಾಡಿರೋ ಕಂಪನಿ. ಮೋದಿ ನಂತರ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿರೋದೇ ಮೆಕ್ಸಿಕೋ ಪ್ರಧಾನಿ ಆಂಡ್ರೂಸ್ ಮ್ಯಾನುವಲ್ ಲೋಪೆಜ್ ಒಬ್ರಡಾರ್. ಅವರು 64 ಪರ್ಸಂಟ್‌ಗಳಿಸಿ ಎರಡನೇ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ವೀಕ್ಷಿಸಿ:  Drought: ಕರ್ನಾಟಕದಲ್ಲಿ 122 ವರ್ಷಗಳಲ್ಲೇ 3ನೇ ಅತೀ ಭೀಕರ ಬರ! ಮುಂಗಾರು ಮಳೆ ಕೈಕೊಟ್ಟ ಎಫೆಕ್ಟ್ ರಾಜ್ಯಕ್ಕೆ ಬರೆ..!

Video Top Stories