ಬೈಡೆನ್ -ಕಮಲಾ ಯುಗಾರಂಭ, ಭಾರತೀಯ ಟೆಕ್ಕಿಗಳಿಗೆ ಪೌರತ್ವ ಗಿಫ್ಟ್..!

ಅಮೆರಿಕದಲ್ಲಿ ಟ್ರಂಪ್ ಯುಗಾಂತ್ಯವಾಗಿದೆ. ಅಧ್ಯಕ್ಷರಾಗಿ ಡಿಮಾಕ್ರೇಟ್ ಪಕ್ಷದ ಜೋ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾನ ವಚನ ಸ್ವೀಕರಿಸುತ್ತಿದ್ದಂತೆ ಬೈಡನ್ ಟ್ರಂಪ್ ಕಾಲದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದ್ದಾರೆ. 

First Published Jan 21, 2021, 12:47 PM IST | Last Updated Jan 21, 2021, 12:47 PM IST

ವಾಷಿಂಗ್‌ಟನ್ (ಜ. 21): ಅಮೆರಿಕದಲ್ಲಿ ಟ್ರಂಪ್ ಯುಗಾಂತ್ಯವಾಗಿದೆ. ಅಧ್ಯಕ್ಷರಾಗಿ ಡಿಮಾಕ್ರೇಟ್ ಪಕ್ಷದ ಜೋ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾನ ವಚನ ಸ್ವೀಕರಿಸುತ್ತಿದ್ದಂತೆ ಬೈಡನ್ ಟ್ರಂಪ್ ಕಾಲದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದ್ದಾರೆ. ಇನ್ನು ಟ್ರಂಪ್ ಹೊಸ ಪಕ್ಷ ಸ್ಥಾಪಿಸಲು ಚಿಂತಿಸುತ್ತಿದ್ದಾರಂತೆ. ಟ್ರಂಪ್ ಈಗಾಗಲೇ ತಮ್ಮ ಆಪ್ತರೊಡನೆ ಸಮಾಲೋಚನೆ ನಡೆಸಿದ್ದಾರೆಂದು ಅಮೆರಿಕದ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಬಿಎಸ್‌ವೈ ಸಂಪುಟದಲ್ಲಿ ಭಾರೀ ಬದಲಾವಣೆ, ಯಾರಿಗೆ ಯಾವ ಖಾತೆ..?

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅಮೆರಿಕ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ ಮೊದಲ ವಲಸಿಗ, ದಕ್ಷಿಣ ಏಷ್ಯಾದ, ಕಪ್ಪು ವರ್ಣೀಯ ಮಹಿಳೆ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು ಇದೇ ಮೊದಲು.  ರೂಪಾಂತರಿ ವೈರಸ್ ಮೇಲೆಯೂ ಕೊರೊನಾ ಲಸಿಕೆ ಪ್ರಭಾವ ಬೀರುತ್ತೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಇವೆಲ್ಲಾ ಸುದ್ದಿಗಳ ಬಗ್ಗೆ ವಿವರವಾದ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!