Asianet Suvarna News Asianet Suvarna News

Abu Dhabi: ಒಂದೇ ಕ್ಷಣದಲ್ಲಿ 1200 ಮಂದಿರಗಳಲ್ಲಿ ಪೂಜೆ..! ವಿಶೇಷತೆಗಳ ಆಗರ ಅಬುಧಾಬಿ ಹಿಂದೂ ಮಂದಿರ..!

ಜನವರಿ 22..ಶ್ರೀ ರಾಮ ಮಂದಿರ.. ಅಯೋಧ್ಯಾ!
ಸ್ವಾಮಿ ನಾರಾಯಣರಿಗೆ ಪುಷ್ಪ ಸಲ್ಲಿಸಿ ಉದ್ಘಾಟನೆ..! 
ಅರಬ್ಬರ ಭೂಮಿಯಲ್ಲಿ ಬೃಹತ್ ಹಿಂದೂ ಮಂದಿರ..!

ಪ್ರಧಾನಿ ನರೇಂದ್ರ ಮೋದಿ ಅವರು ಅರಬ್ಬರ ನಾಡಿನಲ್ಲಿ ಇದ್ದಾರೆ. ಭವ್ಯ ಸ್ವಾಗತದೊಂದಿಗೆ ಯುಎಇ (UAE) ಮೋದಿಯವರನ್ನ ಸ್ವಾಗತಿಸಿತ್ತು. ಅಹ್ಲಾನ್ ಮೋದಿ ಅಂದ್ರೆ ಮೋದಿಗೆ (Narendra Modi) ಸ್ವಾಗತ ಅನ್ನೋ ಭವ್ಯವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈಗ ಅದೇ ಅರಬ್ಬರ ದೇಶದಲ್ಲಿ ಮೋದಿ ಇತಿಹಾಸವನ್ನ ಸೃಷ್ಟಿಸಿದ್ದಾರೆ. ಮುಸ್ಲಿಂ ದೇಶದಲ್ಲಿ ಮೊದಲ ಭವ್ಯ ಹಿಂದೂ ಮಂದಿರವನ್ನ(Hindu temple) ಉದ್ಘಾಟನೆ ಮಾಡಿದ್ದಾರೆ ನರೇಂದ್ರ ಮೋದಿ. ಇತಿಹಾಸವೊಂದು ಸೃಷ್ಟಿಯಾಗಿದೆ. ಕಂಡು ಕೇಳರಿಯದ ಚರಿತ್ರೆಯೊಂದು ದಾಖಲಾಗಿದೆ. ಪಶ್ಚಿಮ ಏಷ್ಯಾದ ಮೊಟ್ಟ ಮೊದಲ ಹಿಂದೂ ಮಂದಿರವೊಂದು ಅರಬ್ ದೇಶದಲ್ಲಿ ಉದ್ಘಾಟನೆಯಾಗಿದೆ. ಮುಸ್ಲಿಮರ ದೇಶದಲ್ಲಿ ನಿರ್ಮಾಣವಾದ ಮಂದಿರವನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?