ಮಡಿಕೇರಿ ಮಹಿಳೆಯರ ವ್ಯಾಪಾರ ದರ್ಬಾರ್

ಅಲ್ಲಿ ಎಲ್ಲಿ ನೋಡಿದರೂ ಮಹಿಳೆಯರದ್ದೇ ದರ್ಬಾರ್. ತಾವೇ ತಯಾರಿಸಿದ ಬಗೆ ಬಗೆಯ ತಿಂಡಿತಿನಿಸುಗಳೊಂದಿಗೆ ಬಣ್ಣಬಣ್ಣದ ಹೋಂಮೇಡ್ ವೈನ್​! ಇನ್ನೂ  ಬಣ್ಣ ಬಣ್ಣದ ಸಾಂಪ್ರದಾಯಿಕ ಧಿರಿಸಿನಲ್ಲಿ ಮಹಿಳಾಮಣಿಗಳು ರಾರಾಜಿಸುತ್ತಿದ್ದರು. ಮಡಿಕೇರಿಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಆ ಮಹಿಳಾ ಮೇಳ ಹೇಗಿತ್ತು ಕಣ್ತುಂಬಿಕೊಳ್ಳಿ.

First Published Mar 23, 2022, 5:10 PM IST | Last Updated Mar 23, 2022, 5:10 PM IST

ಕೊಡವ ಸಮಾಜದಲ್ಲಿ ನಡೆದ ಅದ್ದೂರಿಯ ಮಹಿಳಾ ಫೆಸ್ಟ್ ಝಲಕ್ ಇದು. ರಾರಾಜಿಸುತ್ತಿದ್ದ ಬಗೆ ಬಗೆಯ ತಿಂಡಿ ನಿನಿಸು, ವೈನ್(wine)​ಗಳು, ಬಾಯಲ್ಲಿ ನೀರೂರಿಸುವ ತಿಂಡಿಗಳು...ಬಣ್ಣ ಬಣ್ಣದ ಹೋಂಮೇಡ್ ವೈನ್​ಗಳು...ಜೊತೆಗೆ ಕೂರ್ಗ್(coorg) ಸ್ಪೆಷಲ್ ಫುಡ್  ಬೇರೆ...ಇವುಗಳ ಮಾರಾಟದಲ್ಲಿ ತಲ್ಲೀನರಾಗಿರುವ ಮಹಿಳಾಮಣಿಗಳು. 

ಅಬ್ಬಬ್ಬಾ... ಏನು ವ್ಯಾಪಾರ ಏನು ವಹಿವಾಟು! ಅಂದ ಹಾಗೆ ಇದು ಯಾವುದೇ ಶಾಪಿಂಗ್ ಕಾಂಪ್ಲೆಕ್ಸ್ ಅಲ್ಲ. ಬದಲಾಗಿ ಮಹಿಳಾ ದಿನಾಚರಣೆ(women's day) ಪ್ರಯುಕ್ತ ಮಡಿಕೇರಿ(madikeri)ಯ ಪೊಮ್ಮಕ್ಕಡ ಕೂಟದವರು ಕೊಡವ ಸಮಾಜದಲ್ಲಿ ಆಯೋಜಿಸಿದ ಮಹಿಳಾ ಫೆಸ್ಟ್‌ನ ದೃಶ್ಯ. ಇದೇ ಮೊದಲ ಬಾರಿಗೆ ಈ ಮೇಳವನ್ನು ಆಯೋಜನೆ ಮಾಡಿದ್ದು ಮಹಿಳೆಯರು. ವಿಶೇಷ ಎಂದರೆ ಹೆಚ್ಚಾಗಿ ಕೊಡಗಿನ ಮನೆಗಳಲ್ಲಿ ಮಾಡುವಂಥ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು ರಾರಾಜಿಸುತ್ತಿದ್ದವು. ಜೊತೆಗೆ ಎಲ್ಲರ ಗಮನ ಸೆಳೆಯುತ್ತಿದ್ದದ್ದು ಹೋಂಮೇಡ್ ವೈನ್​ಗಳು. ವಿವಿಧ ಹಣ್ಣುಗಳಿಂದ ತಯಾರಿಸಿದ ಕೊಡಗಿನ ವೈನ್​ಗಳು ಹೆಚ್ಚಾಗಿ ಕಂಡುಬಂದಿದ್ದು ಮಾರಾಟವೂ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಉಪ್ಪಿನಕಾಯಿ(pickle),ಸಂಡಿಗೆ, ಹಪ್ಪಳ ಸೇರಿದಂತೆ ಹಲವು ಖಾದ್ಯಗಳು ಇಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಮೇಳಕ್ಕೆ ಆಗಮಿಸಿದವರು ವಿವಿಧ ಖಾದ್ಯಗಳನ್ನು ಸವಿದು  ಬಾಯಿ ಚಪ್ಪರಿಸಿಕೊಳ್ಳುತ್ತಿದ್ದರು.

ಇನ್ನೂ ಕೊಡಗಿನವರು ಮಾತ್ರವಲ್ಲದೆ ಬೆಂಗಳೂರು-ಮೈಸೂರುಗಳಲ್ಲಿ ಉದ್ದಿಮೆ ನಡೆಸುತ್ತಿರುವ ಮಹಿಳೆಯರು ಕೂಡ ಇಲ್ಲಿ ಪಾಲ್ಗೊಂಡು ತಮ್ಮ ಉತ್ಪಾದನೆಗಳನ್ನು ಪರಿಚಯಿಸಿದರು. ಕೇವಲ ಆಹಾರ ಪದಾರ್ಥಗಳು ಮಾತ್ರವಲ್ಲದೆ ಬಟ್ಟೆಗಳು, ಮಣ್ಣಿನ ಪರಿಕರಗಳು ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಗಮನ ಸೆಳೆದವು.ಇದೇ ಮೊದಲ ಬಾರಿಗೆ ಇಂತಹ ಅವಕಾಶ ಸಿಕ್ಕಿದ ಕಾರಣ ಮಹಿಳೆಯರು ಫುಲ್ ಖುಷ್ ಆಗಿದ್ದರು. ಇದೇ ರೀತಿ ಮೇಳಗಳು ಆಗಾಗ ನಡೆಯುತ್ತಿದ್ದರೆ ನಮಗೂ ಒಂದು ಅವಕಾಶ ಸಿಗುತ್ತದೆ .ಇಂತಹ ಮೇಳ ಪ್ರತೀ ವರ್ಷ ನಡೆಯಬೇಕು ಎಂದು ಸಂತಸ ಹಂಚಿಕೊಂಡರು.

Work And Menopause: ಅಮ್ಮನಿಗೆ ಗೊತ್ತಿರಲ್ಲ..ನೀವೇ ಹೇಳಿ ಕೊಡ್ಬೇಕು !

ಒಟ್ಟಿನಲ್ಲಿ ತಮಗಾಗಿ ಇರುವ ದಿನವನ್ನು ಮಹಿಳೆಯರು ಇಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಎಲ್ಲಾರಂತೆ ತಾವೂ ಕೂಡ ತಮ್ಮ ಕಾಲ ಮೆಲೆ ನಿಂತು ವ್ಯಾಪಾರ ವಹಿವಾಟು ನಡೆಸಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.