ಕಿರುತೆರೆ ಸವಾಲು ಮತ್ತು ಸಾಧ್ಯತೆ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಂಜನಿ ರಾಘವನ್ ವಿಚಾರ ಮಂಡನೆ!
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಟಿ ರಂಜನಿ ರಾಘವನ್ ಭಾಗಿ. ಕಿರುತೆರೆಯ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಚರ್ಚಿಸಿದರು. ಜನಪ್ರಿಯ ಧಾರಾವಾಹಿಗಳನ್ನು ಸ್ಮರಿಸಿದರು.
ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಿರುತೆರೆ ನಟಿ ರಂಜನಿ ರಾಘವನ್ ಭಾಗಿಯಾಗಿದ್ದರು. ಪುಟ್ಟಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ರಂಜನಿ ಕತೆ ಡಬ್ಬಿ ಮತ್ತು ಸ್ವೈಪ್ ರೈಟ್ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಸಮ್ಮೇಳನದಲ್ಲಿ ಕಿರುತೆರೆಯಲ್ಲಿ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಹಲವು ಜನಪ್ರಿಯ ಧಾರಾವಾಹಿ, ರಿಯಾಲಿಟಿ ಶೋ ಮತ್ತು ಕಾರ್ಯಕ್ರಮಗಳನ್ನು ನೆನಪಿಸಿಕೊಂಡಿದ್ದಾರೆ.
ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಗೋಲ್ಡ್ ಸುರೇಶ್‌ಗೆ ಬಂತು ಬಂಪರ್ ಆಫರ್!