Big3ತುಮಕೂರು ಬೆಸ್ಕಾಂ ಅಧಿಕಾರಿಗಳಿಗೆ ಛಾಟಿ: ರೈತರಿಗೆ ಟಿಸಿ ವಿತರಣೆಗೆ ಅನುದಾನ ಬಿಡುಗಡೆ

ತುಮಕೂರು ಬೆಸ್ಕಾಂ ಅಧಿಕಾರಿಗಳಿಗೆ ಸುವರ್ಣ ನ್ಯೂಸ್ ಬಿಗ್‌3 ಬಿಸಿ ಮುಟ್ಟಿಸಿದ್ದು, ರೈತರ ಸಮಸ್ಯೆಗೆ ಪರಿಹಾರ ಕೊಡಿಸಿದೆ.

First Published Feb 23, 2023, 2:30 PM IST | Last Updated Feb 23, 2023, 2:30 PM IST

ತುಮಕೂರು ನಗರದ ಬೆಸ್ಕಾಂ ಕಚೇರಿ ಉಗ್ರಾಣದ ದಾಸ್ತಾನು ಮಳಿಗೆಯಲ್ಲಿ ರೈತರಿಗೆ ಹಂಚಿಕೆ ಮಾಡದೇ ಟಿಸಿಯನ್ನ ಹಂಗೇ ಇಟ್ಟಿದ್ರು. ರೈತರಿಗೆ ಅಗತ್ಯವಿರುವ ವಿದ್ಯುತ್‌ ಪರಿವರ್ತಕಗಳನ್ನು ಹಂಚಿಕೆ ಮಾಡಲು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರು. ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದರು. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್-3 ವರದಿ ಪ್ರಸಾರ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಯಾಗಿ  ಬಿಸಿ ಮುಟ್ಟಿಸಲಾಯಿತು. ರೈತರ ಬಗೆಗಿನ ಕಾಳಜಿಯಿಂದ ನಾವು ಮಾಡಿದ ವರದಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ತತ್ಕಾಲ್ ಯೋಜನೆಯಲ್ಲಿ ಟಿ.ಸಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದ ರೈತರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಒಟ್ಟು 5695 ಟಿಸಿ ವಿತರಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಚಿಕ್ಕಮಗಳೂರಿನ ಮಹಾನುಭಾವ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ‌: ...