ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮುಳ್ಳಯ್ಯನಗಿರಿ
ಚಿಕ್ಕಮಗಳೂರಿನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿಯನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ಮಂಜಿನ ಕಣ್ಣಾಮುಚ್ಚಾಲೆಯಾಟ ನೋಡುವುದೇ ಒಂದು ರೀತಿಯ ಸೊಬಗು.
ಚಿಕ್ಕಮಗಳೂರು(ಜೂ.02): ಕರ್ನಾಟಕದ ಅತ್ಯುನ್ನತ ಪರ್ವತಶಿಖರಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಮುಳ್ಳಯ್ಯನಗಿರಿ ಪ್ರವಾಸಿಗರ ಪಾಲಿನ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಕಳೆದ 65 ದಿನಗಳಿಂದ ಲಾಕ್‌ಡೌನ್ ಆಗಿರುವ ಪರಿಣಾಮ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಆದರೆ ಮುಳ್ಳಯ್ಯನಗಿರಿ ಪ್ರಕೃತಿ ಸೌಂದರ್ಯ ಮಾತ್ರ ಕಣ್ಮನ ಸೆಳೆಯುತ್ತಿದೆ.
ಚಿಕ್ಕಮಗಳೂರಿನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿಯನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ಮಂಜಿನ ಕಣ್ಣಾಮುಚ್ಚಾಲೆಯಾಟ ನೋಡುವುದೇ ಒಂದು ರೀತಿಯ ಸೊಬಗು.
ಈ ತಾಯಿ ಮುಟ್ಟಾದಾಗ ಬ್ರಹ್ಮಪುತ್ರ ಕೆಂಪಾಗುತ್ತದೆ!
ಮುಳ್ಳಯ್ಯನಗಿರಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ ಪ್ರವಾಸಿಗರು ಮಾತ್ರ ಬರುವ ಹಾಗಿಲ್ಲ. ಗಿರಶಿಖರಗಳಲೆಲ್ಲಾ ಹಚ್ಚಹಸಿರಾಗಿವೆ. ಗಿರಿಪ್ರದೇಶದಲ್ಲಿ ಜನರಿಲ್ಲದೇ ಪ್ರಕೃತಿ ಪ್ಲಾಸ್ಟಿಕ್ ಮುಕ್ತವಾಗಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.