ದುರ್ಗದ ಬಿಸಿಲಿಗಷ್ಟೇ ಅಲ್ಲ, ಕಣ್ಮನಕ್ಕೂ ತಂಪೆರೆಯುತ್ತಿದೆ Musical Fountain

ಚಿತ್ರದುರ್ಗ ಅಂದ್ರೆ ಸಾಕು ಬರದನಾಡು, ಬಿಸಿಲನಾಡು ಎಂದು ಮೂಗು ಮುರಿಯುವವರೇ ಹೆಚ್ಚು. ಅಂತದ್ರಲ್ಲಿ ಇಲ್ಲಿನ ಸ್ಥಳೀಯ ಶಾಸಕರು ಮಾಡಿರೋ ಅಭಿವೃದ್ಧಿ ಕಾರ್ಯಕ್ಕೆ ಜಿಲ್ಲೆಯ ಜನರು ಶಹಬ್ಬಾಶ್ ಎನ್ನುತ್ತಿದ್ದಾರೆ. 

First Published Apr 6, 2022, 1:12 PM IST | Last Updated Apr 6, 2022, 1:12 PM IST

ಝಗಮಗಿಸೋ ದೀಪಗಳ ಜೊತೆ ನರ್ತಿಸುವ ನೀರು.. ಹಿಂದಿಂದ ಅಲೆ ಅಲೆಯಾಗಿ ಹರಿದು ಬರುವ ಸಂಗೀತ.. ಹೌದು- ಇಂಥದೊಂದು ಸುಂದರ ಸಂಗೀತ ಕಾರಂಜಿ ಚಿತ್ರದುರ್ಗದ ಹೊಸ ಆಕರ್ಷಣೆಯಾಗಿದೆ.

ಕೋಟೆಗಳಿಂದಾಗಿ ಪ್ರಸಿದ್ಧಿ ಪಡೆದು ಪ್ರವಾಸಿಗರನ್ನು ಸೆಳೆಯುತ್ತಿತ್ತು ಚಿತ್ರದುರ್ಗ. ಈಗ ಇಲ್ಲಿ ಬಂದು ಕೋಟೆ ನೋಡಿ, ಬಿಸಿಲಿಗೆ ದಣಿದ ಪ್ರವಾಸಿಗರ ಮನಸ್ಸಿಗೆ ತಂಪೆರೆಯಲು ಸಜ್ಜಾಗಿ ನಿಂತಿದೆ ಸಂಗೀತ ಕಾರಂಜಿ. 
 ಇಲ್ಲಿನ ಹಿರಿಯ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ ಅವರು ಜನರ ಮನೋರಂಜನೆಗಾಗಿ ನಗರದಲ್ಲಿರುವ ಕನಕದಾಸರ ಪ್ರತಿಮೆಯ ವೃತ್ತ, ಒನಕೆ ಓಬವ್ವಳ ಪ್ರತಿಮೆಯ ವೃತ್ತ, ಮತ್ತು ರಾಜವೀರ ಮದಕರಿ ನಾಯಕನ ಪ್ರತಿಮೆ ವೃತ್ತ- ಹೀಗೆ ಮೂರು ವೃತ್ತಗಳಲ್ಲಿ ಕಾರಂಜಿ ನಿರ್ಮಿಸಿ ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದ್ದಾರೆ. 

Aeroponic Agriculture: ಮಣ್ಣಿನಡಿ ಮಾತ್ರವಲ್ಲ, ಗಾಳಿಯಲ್ಲೂ ಬೆಳೆಯುತ್ತೆ ಆಲೂಗಡ್ಡೆ!

ಈ ಕಲರ್‌ಫುಲ್ ಕಾರಂಜಿಯು ಈಗಾಗಲೇ ನೂರಾರು ಪ್ರವಾಸಿಗರನ್ನು ಪ್ರತಿ ದಿನ ಸೆಳೆಯುತ್ತಿದೆ. ಕಾರಂಜಿ ಎದುರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಸದಾ ಜನರು ನಿರತರಾಗಿದ್ದು, ಇಂಥ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಲಿ ಸ್ಥಳೀಯರು ಹಾರೈಸಿದ್ದಾರೆ.
 

Video Top Stories