Asianet Suvarna News Asianet Suvarna News

ಟೋಕಿಯೋ 2020: ಕಮಾನ್‌ ಇಂಡಿಯಾ ಕಲರವ..!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಅತಿಹೆಚ್ಚು ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ಭಾರತದ 127 ಕ್ರೀಡಾಪಟುಗಳು 18 ಸ್ಪರ್ಧೆಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ.
 
First Published Jul 23, 2021, 7:24 PM IST | Last Updated Jul 23, 2021, 7:24 PM IST

ಬೆಂಗಳೂರು(ಜು.23): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ಜಪಾನ್‌ ರಾಜಧಾನಿ ಟೋಕಿಯೋ ನಗರದ ನ್ಯಾಷನಲ್‌ ಸ್ಟೇಡಿಯಂನಲ್ಲಿ ಅಧಿಕೃತವಾಗಿ ಟೋಕಿಯೋ ಕ್ರೀಡಾಕೂಟ ಹಸಿರು ನಿಶಾನೆ ತೋರಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಅತಿಹೆಚ್ಚು ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ಭಾರತದ 127 ಕ್ರೀಡಾಪಟುಗಳು 18 ಸ್ಪರ್ಧೆಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಟೋಕಿಯೋ 2020 ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಇನ್ನು ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಮೈದಾನ ಪ್ರವೇಶಿಸಿದರು. ಈ ವೇಳೆ ದೇಶ ವಾಸಿಗಳು ಒಕ್ಕೊರಲಿನಿಂದ ಕಮಾನ್ ಇಂಡಿಯಾ ಎನ್ನುವ ಘೋಷಣೆ ಕೂಗಿ ಹುರಿದುಂಬಿಸಿದರು. ಬೆಂಗಳೂರು ಸಾಯ್ ಕೇಂದ್ರದಲ್ಲಿ ಕಂಡುಬಂದ ಭಾವನಾತ್ಮಕ ವಿಡಿಯೋ ಇಲ್ಲಿದೆ ನೋಡಿ
 
Video Top Stories