Asianet Suvarna News Asianet Suvarna News

ಟೋಕಿಯೋ 2020: ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹೆಚ್ಚುವರಿ ಪೊಲೀಸ್ ಅಧಿಕಾರಿ..!

49 ಕೆ.ಜಿ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಚಾನು ಸ್ನ್ಯಾಚ್‌ ವಿಭಾಗದಲ್ಲಿ 87 ಕೆ.ಜಿ, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 115 ಹೀಗೆ ಒಟ್ಟು 202 ಕೆ.ಜಿ. ವೇಟ್‌ಲಿಫ್ಟ್ ಮಾಡಿ ಒಲಿಂಪಿಕ್ಸ್‌ ಬೆಳ್ಳಿ ಪದಕ ಜಯಿಸಿದ್ದಾರೆ.

ಇಂಪಾಲ್‌(ಜು.29): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸೈಕೋಮ್‌ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ದಿನವೇ ಮಣಿಪುರ ಸರ್ಕಾರವು ವೇಟ್‌ಲಿಫ್ಟರ್‌ ಮೀರಾಬಾಯಿಗೆ ಅಡಿಷನಲ್‌ ಸೂಪರಿಟೆಂಡೆಂಟ್‌ ಆಫ್ ಪೊಲೀಸ್‌(ಕ್ರೀಡೆ) ಆಗಿ ನೇಮಕವಾಗಿದ್ದಾರೆ.

49 ಕೆ.ಜಿ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಚಾನು ಸ್ನ್ಯಾಚ್‌ ವಿಭಾಗದಲ್ಲಿ 87 ಕೆ.ಜಿ, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 115 ಹೀಗೆ ಒಟ್ಟು 202 ಕೆ.ಜಿ. ವೇಟ್‌ಲಿಫ್ಟ್ ಮಾಡಿ ಒಲಿಂಪಿಕ್ಸ್‌ ಬೆಳ್ಳಿ ಪದಕ ಜಯಿಸಿದ್ದಾರೆ.

ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ಇದೀಗ ಮಣಿಪುರ ಮುಖ್ಯಮಂತ್ರಿ ಎನ್‌. ಬೀರೆನ್‌ ಸಿಂಗ್ ದೇಶದ ಹೆಮ್ಮೆಯ ಸಾಧಕಿ ಮೀರಾಬಾಯಿ ಅಧಿಕಾರ ಸ್ವೀಕರಿಸುವಾಗ ಸಾಥ್ ನೀಡಿದ್ದಾರೆ. ಇದಷ್ಟೇ ಅಲ್ಲದೇ ಹೊಸ ಕೊಠಡಿಗೆ ಕರೆತಂದು ಪುಷ್ಪಗುಚ್ಚ ನೀಡುವ ಮೂಲಕ ಮತ್ತೊಮ್ಮೆ ಅಭಿನಂದಿಸಿದ್ದಾರೆ. ಮುಖ್ಯಮಂತ್ರಿಯ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.