ಹೈಟೆಕ್ ದೇವಸ್ಥಾನ: ತೀರ್ಥ ಕೊಡಲು ಬಂತು ಟಚ್‌ಫ್ರೀ ಸ್ವಯಂಚಾಲಿತ ಯಂತ್ರ!
- ದೇವಸ್ಥಾನಗಳಲ್ಲಿ ತೀರ್ಥ ನೀಡಲು ಸಂಪರ್ಕ ರಹಿತ ಸ್ವಯಂಚಾಲಿತ ಯಂತ್ರ ಲೋಕಾರ್ಪಣೆ
- ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅವಿಷ್ಕಾರ
- ಕ್ಯಾಂಪಸ್ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ಪ್ರಾಂಶುಪಾಲ ನಿರಂಜನ್ ಚಿಪ್ಲೂಂಕರ್ ಉದ್ಘಾಟನೆ
ಉಡುಪಿ (ಜೂ. 18): ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲರೂ ಈಗ ಸಂಪರ್ಕರಹಿತ ವಸ್ತುಗಳನ್ನೇ ಬಳಸಲು ಬಯಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿರುವ ಸ್ಯಾನಿಟೈಜರ್ ಸ್ಟ್ಯಾಂಡ್‌ಗಳಿಂದ ಹಿಡಿದು ಏರ್‌ಪೋರ್ಟ್‌ನಲ್ಲಿರುವ ಕಿಯಾಸ್ಕ್‌ಗಳೆಲ್ಲವೂ ಈಗ ಟಚ್‌ಫ್ರೀ ಸ್ವರೂಪ ಪಡೆದುಕೊಂಡಿವೆ.
ಇದನ್ನೂ ನೋಡಿ | ಮಂಗ್ಳೂರು ಯುವಕನಿಂದ ಕೈ ಬಳಸದೇ ಕೈ ಸ್ವಚ್ಛ ಮಾಡೋ ಸ್ಯಾನಿಟೈಜರ್ ಸ್ಟ್ಯಾಂಡ್!...
ಈಗ ಉಡುಪಿ-ಕಾರ್ಕಳದ ದೇವಸ್ಥಾನವೊಂದರಲ್ಲೂ ತೀರ್ಥ ನೀಡಲು ಸಂಪರ್ಕ ರಹಿತ ಸ್ವಯಂಚಾಲಿತ ಯಂತ್ರ ಲೋಕಾರ್ಪಣೆ ಮಾಡಲಾಗಿದೆ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಅವಿಷ್ಕಾರ ನಡೆದಿದ್ದು. ಕ್ಯಾಂಪಸ್ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ಇದನ್ನು ಅಳವಡಿಸಲಾಗಿದೆ.