ಬ್ರಹ್ಮಾಂಡದಿಂದ ಬಂದ ವಿಚಿತ್ರ ಶಬ್ದ: ನಾಸಾ ವಿಜ್ಞಾನಿಗಳೇ ಸ್ತಬ್ಧ!

ಕೆನಡಾದ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಸಂಶೋಧನಾ ಕೇಂದ್ರದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಅನಾಮತ್ತು 409 ದಿನಗಳ ಕಾಲ ಸಂಶೋಧನೆ ಮಾಡಿರುವಂತೆ, ಪ್ರತಿ 16 ದಿನಗಳಿಗೊಮ್ಮೆ ವಿಚಿತ್ರವಾದ ರೆಡಿಯೋ ಸಿಗ್ಮಲ್’ವೊಂದು ಕೇಳಿಸಿದೆ.

First Published Feb 13, 2020, 8:06 PM IST | Last Updated Feb 13, 2020, 8:06 PM IST

ಬೆಂಗಳೂರು(ಫೆ.13): ಬ್ರಹ್ಮಾಂಡದ ಬೇರೆ ಬೇರೆ ನಿಗೂಢ ಜಾಗಗಳಲ್ಲಿ ನಮ್ಮ ನಿಮ್ಮಂತಹ ಮಾನವರಿದ್ದಾರಾ?, ಮಾನವರನ್ನೇ ಮೀರಿಸುವ ಜೀವಿಗಳು ವಾಸಿಸುತ್ತಿವೆಯೇ? ಎಂದು ಹಠಕ್ಕೆ ಬಿದ್ದವರಂತೆ ಸಂಶೋಧಿಸುತ್ತಿರುವ ವಿಜ್ಞಾನಿಗಳು ಶಾಕಿಂಗ್ ನ್ಯೂಸ್’ವೊಂದನ್ನು ಬಿಚ್ಚಿಟ್ಟಿದ್ದಾರೆ. ಕೆನಡಾದ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಸಂಶೋಧನಾ ಕೇಂದ್ರದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಅನಾಮತ್ತು 409 ದಿನಗಳ ಕಾಲ ಸಂಶೋಧನೆ ಮಾಡಿರುವಂತೆ, ಪ್ರತಿ 16 ದಿನಗಳಿಗೊಮ್ಮೆ ವಿಚಿತ್ರವಾದ ರೆಡಿಯೋ ಸಿಗ್ಮಲ್’ವೊಂದು ಕೇಳಿಸಿದೆ. ಇದು ಅನ್ಯಗ್ರಹ ಜೀವಿಗಳು ಬ್ರಹ್ಮಾಂಡದಲ್ಲಿ ತೇಲಿ ಬಿಟ್ಟಿರಬಹುದಾದ ರೆಡಿಯೋ ಸಿಗ್ನಲ್ ಇರಬಹದು ಎಂದು ಊಹಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...