Big 3 Impact: ಶವಾಗಾರವಿಲ್ಲದ ಕೆಂಭಾವಿ ಆಸ್ಪತ್ರೆಗಳಿಗೆ ಜಿಲ್ಲಾ ನ್ಯಾಯಾಧೀಶರ ಭೇಟಿ

ಕೋಟಿ ಕೋಟಿ ಸುರಿದು ಆಸ್ಪತ್ರೆ ಕಟ್ಟಿದ್ದಾರೆ. ಆದ್ರೆ, ಇಲ್ಲೊಂದು ಶವಗಾರ ಇಲ್ಲದೇ ಇರೋದ್ರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಬಿಗ್ 3 ವರದಿ ಮಾಡಿ ಸಂಚಲನ ಸೃಷ್ಟಿಸಿದೆ.

First Published Sep 12, 2022, 8:21 PM IST | Last Updated Sep 12, 2022, 8:21 PM IST

ಯಾದಗಿರಿ, (ಸೆಪ್ಟೆಂಬರ್.12): ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಕೋಟಿ ಕೋಟಿ ಸುರಿದು ಆಸ್ಪತ್ರೆ ಕಟ್ಟಿದ್ದಾರೆ. ಆದ್ರೆ, ಇಲ್ಲೊಂದು ಶವಗಾರ ಇಲ್ಲದೇ ಇರೋದ್ರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿ ಬಂದಿದೆ. ಮರಣೋತ್ತರ ಪರೀಕ್ಷೆ ಮಾಡಲು ರೂಂ ಇಲ್ಲದೇ ಹೆಣಗಾಡೋ ಪರಿಸ್ಥಿತಿ ಇಲ್ಲಿನ ಆರೋಗ್ಯ ಸಿಬ್ಬಂದಿಗಳದ್ದು. ಮೃತ ದೇಹಗಳನ್ನು 2 ಕಿ.ಮೀಟರ್ ದೂರ ತೆಗೆದುಕೊಂಡು ಹೋಗ್ಬೇಕು. ಜೊತೆಗೆ ವೈದ್ಯಕೀಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಬೇಕು. ನಂತರವೇ ಇಲ್ಲಿ ಪೋಸ್ಟ್ ಮಾರ್ಟಂ ನಡೆಯೋದು. ಈ ಅಮಾನವೀಯ ಘಟನೆಗೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಬಿಗ್ 3 ಸುದ್ದಿ ಪ್ರಸಾರ ಮಾಡಿತ್ತು .

Yadagiri : ಶವಾಗಾರವಿಲ್ಲದ ಬಗ್ಗೆ Big 3 ವರದಿಯಲ್ಲಿ ಪ್ರಶ್ನಿಸಿದ್ದಕ್ಕೆ ಶಾಸಕರ ಚೇಲಾಗಳಿಂದ ಧಮ್ಕಿ!

ಇದರ ಬೆನ್ನಲ್ಲೇ ಇದೀಗ ಯಾದಗಿರಿ ಜಿಲ್ಲಾ ನ್ಯಾಯಾಧೀಶರು ಇಂದು(ಸೋಮವಾರ) ಕೆಂಭಾವಿಯ ಶವಾಗಾರವಿಲ್ಲದ ಆಸ್ಪತ್ರೆಗಳಿಗೆ  ಭೇಟಿ ಪರಿಶೀಲನೆ ನಡೆಸಿದರು. ಈ ಮೂಲಕ ಬಿಗ್‌3 ವರದಿ ಸಂಚಲನ ಸೃಷ್ಟಿಸಿದೆ.