ಕ್ಲಬ್‌ಗೌಸ್‌ನಲ್ಲಿ ಶ್ರೀರಾಮ, ಸೀತಾಮಾತೆಗೆ ಅವಮಾನ, ಕಾಂಗ್ರೆಸ್‌ ಮುಖಂಡೆ ಮನೆ ಮೇಲೆ ದಾಳಿ

ರಾಜ್ಯ ಕಾಂಗ್ರೆಸ್‌ನ ಐಟಿ ಸೆಲ್‌ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾಯದರ್ಶಿಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ ಅವರ ನಿವಾಸಕ್ಕೆ ತಂಡವೊಂದು ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಮುರಿದು ಹಾಗೂ ಮನೆಗೆ ಮಡ್‌ ಆಯಿಲ್‌ ಬಳಿದಿರುವ ಘಟನೆ ನಡೆದಿದೆ.

First Published Jun 19, 2022, 10:45 AM IST | Last Updated Jun 19, 2022, 11:00 AM IST

ರಾಜ್ಯ ಕಾಂಗ್ರೆಸ್‌ನ ಐಟಿ ಸೆಲ್‌ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾಯದರ್ಶಿಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ (Shailaja Amarnath) ಅವರ ನಿವಾಸಕ್ಕೆ ತಂಡವೊಂದು ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಮುರಿದು ಹಾಗೂ ಮನೆಗೆ ಮಡ್‌ ಆಯಿಲ್‌ ಬಳಿದಿರುವ ಘಟನೆ ನಡೆದಿದೆ. ಪುತ್ತೂರಿನ ಬಪ್ಪಳಿಗೆಯಲ್ಲಿರುವ ಮನೆಯಂಗಳಕ್ಕೆ ಬಂದ ಕೆಲ ಯುವಕರಿದ್ದ ತಂಡವೊಂದು ಮನೆಯ ಕಿಟಕಿಗೆ ಅಳವಡಿಸಿದ ಗಾಜುಗಳನ್ನು ಒಡೆದು, ಮನೆಯ ಸಿಟೌಟ್‌ಗೆ ಮಡ್‌ ಆಯಿಲ್‌ ಸುರಿದು ಪರಾರಿಯಾಗಿದ್ದಾರೆ. 

News Hour ಅಗ್ನಿಪಥಕ್ಕೆ ಕರ್ನಾಟಕವೂ ಅಗ್ನಿಕುಂಡ!

ಜೂ.15ರಂದು ರಾತ್ರಿ 9ಗಂಟೆಗೆ  ಕ್ಲಬ್‌ಹೌಸ್‌ನಲ್ಲಿ (Club House) ‘ಸಂಡೇ ಅಂಕಲ್ಸ್‌ ಆರ್‌ ಮಂಡೇ ನರ್ಸ್’ಎಂಬ ಕಾರ್ಯಕ್ರಮವನ್ನು ತಂಡವೊಂದು ನಡೆಸಿತ್ತು. ಅದರಲ್ಲಿ ಶೈಲಜಾ ಅಮರನಾಥ್‌ ಸಹಿತ ಮುಂತಾದವರು ಭಾಗವಹಿಸಿದ್ದರು. ಈ ವೇಳೆ ಹಿಂದೂ ದೇವರು ದೇವತೆಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಬೇರೆ ಬೇರೆ ಜಾತಿ, ಧರ್ಮಗಳ ಬಗ್ಗೆ ದ್ವೇಷವನ್ನು ಪ್ರಚೋದಿಸುವ ಹಾಗೂ ಸಾಮಾಜಿಕ ಶಾಂತಿಗೆ ಭಂಗ ಉಂಟು ಮಾಡುವ ದುರುದ್ದೇಶದಿಂದ ಮಾತನಾಡಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳ ಪುತ್ತೂರು ಘಟಕದವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಶೈಲಜಾ ಅಮರನಾಥ್‌ ಹಾಗೂ ಮತ್ತಿತ್ತರರು ಕ್ಲಬ್‌ಹೌಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ವೈರಲ್‌ ಆಗುತ್ತಿದೆ.