ವ್ಯಕ್ತಿಗೆ ಕೊರೋನಾ, ಇಡೀ ಕುಟುಂಬಕ್ಕೆ ದಿಗ್ಬಂಧನ, ಕುಡಿಯಲೂ ನೀರೂ ಕೊಡದ ಜನ..!
- ವ್ಯಕ್ತಿಗೆ ಕೊರೋನಾ, ಇಡೀ ಕುಟುಂಬಸ್ಥರಿಗೆ ಗ್ರಾಮದ ಜನ ದಿಗ್ಬಂಧನ
- ಚಾಮರಾಜನಗರದ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದೆ
- ಸೋಂಕಿತನ ಮಗನಿಗೆ ಕುಡಿಯಲು ನೀರೂ ಕೊಡದೇ ಅಮಾನವೀಯತೆ ತೋರಿದ್ದಾರೆ
ಚಾಮರಾಜನಗರ (ಜೂ. 05): ಕೊರೋನಾ ಸೋಂಕಿತರನ್ನು ನೆರೆಹೊರೆಯವರು, ಸುತ್ತಮುತ್ತಲಿನ ಜನ ನೋಡುವ ರೀತಿಯೇ ಬದಲಾಗಿ ಹೋಗಿದೆ. ಕೆಲವೊಮ್ಮೆ ಮಾನವೀಯತೆಯನ್ನೇ ಮರೆತು ವರ್ತಿಸುತ್ತಾರೆ. ವ್ಯಕ್ತಿಗೆ ಕೊರೋನಾ, ಇಡೀ ಕುಟುಂಬಸ್ಥರಿಗೆ ಗ್ರಾಮದ ಜನ ದಿಗ್ಬಂಧನ ಹಾಕಿರುವ ಘಟನೆ ಚಾಮರಾಜನಗರದ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಮಕ್ಕಳಲ್ಲಿ ಸೋಂಕು ತಾಕದಂತೆ ಮಾಡುತ್ತಾ ಪೊಲೀಯೋ ಲಸಿಕೆ..? ನಡೆಯುತ್ತಿದೆ ಹೊಸ ಪ್ರಯೋಗ
ಸೋಂಕಿತನ ಕುಟುಂಬಕ್ಕೆ ಬಾವಿ ಮುಟ್ಟಲು ಜನ ಬಿಟ್ಟಿಲ್ಲ. ಸೋಂಕಿತನ ಮಗನಿಗೆ ಕುಡಿಯಲು ನೀರನ್ನೂ ಕೊಡುತ್ತಿಲ್ಲ. ಇನ್ನು ಒಂದು ವಾರವಾದರೂ ಆರೋಗ್ಯ ಸಿಬ್ಬಂದಿ ಈ ಕಡೆ ಬಂದಿಲ್ಲ. ಸೋಂಕಿತನ ಮಗ ಚಂದ್ರು ಎಂಬುವವರು, ವಿಡಿಯೋ ಮಾಡಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.