Asianet Suvarna News Asianet Suvarna News

ಭಕ್ತ ಅನುಪಸ್ಥಿತಿಯಲ್ಲಿ ಮೈಲಾರನ ಸನ್ನಿಧಿಯಲ್ಲಿ ಭವಿಷ್ಯ ನುಡಿದ ಗೊರವಯ್ಯ

ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ಸಂಪ್ರದಾಯದಂತೆ ಇಲ್ಲಿ  ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.  ಪ್ರತಿ ವರ್ಷದಂತೆ ಈ ಬಾರಿಯೂ ಸಂಪ್ರದಾಯದಂತೆ ಗೊರವಪ್ಪ ಬಿಲ್ಲನ್ನು ಏರಿ ಕಾರಣಿಕ ನುಡಿದ್ರು.
 

ವಿಜಯನಗರ, (ಮಾ.02): ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ಸಂಪ್ರದಾಯದಂತೆ ಇಲ್ಲಿ  ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.  ಪ್ರತಿ ವರ್ಷದಂತೆ ಈ ಬಾರಿಯೂ ಸಂಪ್ರದಾಯದಂತೆ ಗೊರವಪ್ಪ ಬಿಲ್ಲನ್ನು ಏರಿ ಕಾರಣಿಕ ನುಡಿದ್ರು.

ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್ ಎಂದು ಕಾರಣಿಕ ನುಡಿದ್ರು. ಇದರ ಅರ್ಥ   ರಾಜ್ಯಕಾರಣ ಮತ್ತು ಕೃಷಿಯಲ್ಲಿಯೂ ನಷ್ಟದ ಮುನ್ಸೂಚನೆ ನೀಡಿದೆ ಎನ್ನುವದು ದೇವಸ್ಥಾನ ಆಡಳಿತ ಮಂಡಳಿ ವಿಶ್ಲೇಷಣೆ.

ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?

ನಾಡಿನ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಈ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಕೇಳಲು ಬರುತ್ತಾರೆ. ಆದ್ರೆ, ಈ ಬಾರಿ ಕೋವಿಡ್ ಹಿನ್ನೆಯಲ್ಲಿ ಭಕ್ತರಿಗೆ ನಿ‍ಷೇದಿಸಲಾಗಿತ್ತು.  ಆದರೂ ಭಕ್ತಾದಿಗಳು ಕಾರ್ಣಿಕ ಕೇಳಲು ಆಗಮಿಸಿದ್ರು.

Video Top Stories