ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ರಾಯಚೂರಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭ

- ಆಕ್ಸಿಜನ್‌ಗಾಗಿ ಜನರ ಪರದಾಟ ತಪ್ಪಿಸಲು ಅಮೆರಿಕದ ಸೇವಾ ಸಂಸ್ಥೆ ನಿರ್ಧಾರ

- ಲಿಂಗಸೂಗೂರಿನ ಈಶ್ವರ ದೇಗುಲದಲ್ಲಿ ಆಕ್ಸಿಜನ್ ಘಟಕ ಆರಂಭ

- ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಉಪಾಧ್ಯಕ್ಷ ಅನೀಲ್ ದೇಶಪಾಂಡೆ ನೇತೃತ್ವ

First Published Jul 10, 2021, 5:45 PM IST | Last Updated Jul 10, 2021, 5:51 PM IST

ರಾಯಚೂರು (ಜು. 10): ಕೊರೊನಾ 2 ನೇ ಅಲೆ ವೇಳೆಯಲ್ಲಿ ಆಕ್ಸಿಜನ್ ಸಿಗದೇ ಅದೆಷ್ಟೋ ಮಂದಿ ಪರದಾಟ ನಡೆಸಿದ್ದಾರೆ. ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.  ಈಗ 3 ನೇ ಅಲೆ ಬಗ್ಗೆ ತಜ್ಞರು ಸುಳಿವು ನೀಡಿದ್ದಾರೆ.

ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

ಗ್ರಾಮೀಣ ಬಡ ಜನರಿಗೆ ಅನುಕೂಲವಾಗಬೇಕೆಂದು ಅಮೆರಿಕಾದ ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಉಪಾಧ್ಯಕ್ಷ ಅನೀಲ್ ದೇಶಪಾಂಡೆ  ಹೊಸದಾಗಿ ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ಈಶ್ವರ ದೇವಸ್ಥಾನ ಆವರಣದಲ್ಲಿ 2 ಕೋಟಿ 50 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಭೂಮಿ ಪೂಜೆ ನೇರವೇರಿಸಿದ್ದಾರೆ. ಅನೀಲ್ ದೇಶಪಾಂಡೆ ಕಾರ್ಯಕ್ಕೆ ವ್ಯಾಪಾರಿಗಳು ಹಾಗೂ ವೈದ್ಯರು ಸಾಥ್ ನೀಡಿದ್ದಾರೆ.