ಟೊಮ್ಯಾಟೋಗೆ ಬಂಗಾರದ ಬೆಲೆ: ಬಂಪರ್‌ ರೇಟ್‌ನಿಂದ ರೈತರಿಗೆ ಟೆನ್ಷನ್..!

ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಬೆಲೆ ಹೆಚ್ಚಿದ್ದು, ಕಳ್ಳರ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
 

First Published Jul 12, 2023, 10:03 AM IST | Last Updated Jul 12, 2023, 10:03 AM IST

ದಾವಣಗೆರೆ: ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ(tomatoe) ಬಂಪರ್‌ ಬೆಲೆ ಇದ್ದು, ಇದು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೊಲದಲ್ಲಿರುವ ಟೊಮ್ಯಾಟೋವನ್ನು ಕಳ್ಳರು(Thieves) ಕದಿಯುತ್ತಿದ್ದು, ಇದನ್ನು ಕಾಯುವುದೇ ರೈರಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ರೈತರು ರಾತ್ರಿ ವೇಳೆ ಹೊಲದಲ್ಲಿಯೇ ಟೆಂಟ್‌ ಹಾಕಿ ಫಸಲನ್ನು ಕಾಯುತ್ತಿದ್ದಾರೆ. ದಾವಣಗೆರೆ(Davanagere) ಜಿಲ್ಲೆಯ ಮಾಯಗೊಂಡ ಹೋಬಳಿಯಲ್ಲಿ ಹೆಚ್ಚಾಗಿ ಟೊಮ್ಯಾಟೋವನ್ನು ಬೆಳೆಯಲಾಗುತ್ತಿದೆ. ರಾತ್ರಿಯಿಡಿ ಕುಟುಂಬ ಸದಸ್ಯರು ಹೊಲದಲ್ಲಿ ಬೆಳೆಯನ್ನು ಕಾಯುತ್ತಿದ್ದಾರೆ. ಅಲ್ಲದೇ ಹೊಲದಲ್ಲಿ ನಾಯಿಗಳನ್ನು ಕಟ್ಟಿ, 24x7 ಬೆಳೆಯನ್ನು ರೈತರು ಕಾಯುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಜೈನ ಮುನಿ ಹಂತಕರಿಗೆ ಪೊಲೀಸರಿಂದ ಫುಲ್‌ ಗ್ರಿಲ್‌: ವಿಚಾರಣೆ ವೇಳೆ ಖಾಕಿ ದಿಕ್ಕು ತಪ್ಪಿಸಲು ಯತ್ನ!