ಪ್ರೀತಿಸಿದ ಯುವತಿ ಜೊತೆ ಮಠ ಬಿಟ್ಟು ಸ್ವಾಮೀಜಿ ಎಸ್ಕೇಪ್!

ಪ್ರೀತಿಸಿದ ಯುವತಿ ಜೊತೆ ಮಠ ಬಿಟ್ಟು  ಸ್ವಾಮೀಜಿಯೊಬ್ಬರು ಪರಾರಿಯಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶಿವಮಹಂತ ಸ್ವಾಮೀಜಿ ಎರಡು ವರ್ಷ ಹಿಂದೆ ಪಟ್ಟಾಭಿಷೇಕ ಸ್ವೀಕರಿಸಿದ್ದರು.
 

First Published Aug 14, 2022, 3:10 PM IST | Last Updated Aug 15, 2022, 3:23 PM IST

ರಾಮನಗರ (ಆ.14): ಪ್ರೀತಿಗಾಗಿ ಹಾತೊರೆದ ಸ್ವಾಮೀಜಿ, ಪ್ರೀತಿಸಿದ ಯುವತಿ ಜೊತೆ ಮಠ ಬಿಟ್ಟು ಪರಾರಿಯಾದ ಘಟನೆ ರಾಮನಗರದಲ್ಲಿ ನಡೆದಿದೆ. ಇಲ್ಲಿನ ಮಾಗಡಿ ತಾಲೂಕಿನ ಶಿವಮಹಂತ ಸ್ವಾಮೀಜಿ ಎರಡು ವರ್ಷ ಹಿಂದೆ ಮಠಾಧೀಶರಾಗಿದ್ದರು.

ಜಗ್ಗೇಶ್‌ ಅಭಿನಯ ಮಠ ಚಿತ್ರದಲ್ಲಿನ ಪಾತ್ರದಂತೆ, ಎರಡು ವರ್ಷದ ಹಿಂದೆ ಪಟ್ಟಾಭಿಷೇಕವಾಗಿದ್ದ ಸ್ವಾಮೀಜಿ ಪತ್ರ ಬರೆದಿಟ್ಟು ಮಠವನ್ನು ತೊರೆದಿದ್ದಾರೆ. "ನಾನು ಮಠ ಬಿಟ್ಟು ಹೋಗುತ್ತಿದ್ದೇನೆ. ಮತ್ತೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ' ಎಂದು ಪತ್ರದಲ್ಲಿ ಬರೆದು ನಾಪತ್ತೆಯಾಗಿದ್ದಾರೆ.

ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾದ ಎದುರು ಮನೆಯ ಆಂಟಿ!

ಇನ್ನು ಸ್ವಾಮೀಜಿ ಪ್ರೀತಿಸುತ್ತಿದ್ದ ಹುಡುಗಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ವಿವಾಹವಾಗಿತ್ತು. ಸ್ವಾಮೀಜಿಗೆ ಆಕೆಯೊಂದಿಗೆ ಪ್ರೇಮಾಂಕುರವಾಗಿತ್ತು. ವಿವಾಹಿತ ಮಹಿಳೆಯ ಜೊತೆ ಸ್ವಾಮೀಜಿ ಓಡಿ ಹೋಗಿರುವ ಸಾಧ್ಯತೆ ಇದ್ದು, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.