Exclusive: ಮಾಜಿ SDPI ಮುಖಂಡನಿಗೆ ಸ್ಕೆಚ್, ಬಲಿಯಾಗಿದ್ದು ಫಾಜಿಲ್..?

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಚಾರವೊಂದು ಹೊರ ಬಂದಿದೆ. ಸುರತ್ಕಲ್‌ನ ಮುಕ್ಕಾ ಬಳಿ ಮುಸ್ಲಿಂ ಉದ್ಯಮಿಯೊಬ್ಬರನ್ನು ಬಿಳಿ ಬಣ್ಣದ ಕಾರಿನಲ್ಲಿ ಹಂತಕರು ಫಾಲೋ ಮಾಡುತ್ತಾರೆ. 

First Published Jul 31, 2022, 10:15 AM IST | Last Updated Jul 31, 2022, 10:20 AM IST

ಮಂಗಳೂರು (ಜು. 31): ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಚಾರವೊಂದು ಹೊರ ಬಂದಿದೆ. ಸುರತ್ಕಲ್‌ನ ಮುಕ್ಕಾ ಬಳಿ ಮುಸ್ಲಿಂ ಉದ್ಯಮಿಯೊಬ್ಬರನ್ನು ಬಿಳಿ ಬಣ್ಣದ ಕಾರಿನಲ್ಲಿ ಹಂತಕರು ಫಾಲೋ ಮಾಡುತ್ತಾರೆ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಅನುಮಾನ ಬಂದು ಆ ಉದ್ಯಮಿ ತಪ್ಪಿಸಿಕೊಂಡು ಮಸೀದಿಯೊಂದಕ್ಕೆ ಹೋಗುತ್ತಾರೆ. ಅಲ್ಲಿಂದ ಸ್ನೇಹಿತರಿಗೆ, ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾರೆ. ಅಲ್ಲಿಂದ ಸೇಫ್ ಆಗಿ ಹೋಗುತ್ತಾರೆ. ಸ್ಕೆಚ್ ಮಿಸ್ ಅಗಿದ್ರಿಂದ ರಾತ್ರಿ ಮತ್ತೆ ಹಂತಕರ ಪಡೆ ಸುರತ್ಕಲ್‌ಗೆ ಬರುತ್ತದೆ. ಮುಸ್ಲಿಂ ಉದ್ಯಮಿಯ ಅಂಗಡಿಯ ಸುತ್ತಮುತ್ತ ಓಡಾಡುತ್ತದೆ. ಮೊದಲೇ ಅನುಮಾನವಿದ್ದರಿಂದ ಅವರು ರಾತ್ರಿ ಅಂಗಡಿಗೆ ಬರುವುದಿಲ್ಲ. ಅದೇ ಅಂಗಡಿಯ ಎದುರು ಫಾಜಿಲ್ ನಿಂತಿರುತ್ತಾರೆ. ಅವರ ಮೇಲೆ ದಾಳಿ ನಡೆಯುತ್ತದೆ. 

ಮಿಸ್ ಆದ ಸ್ಕೆಚ್‌ಗೆ ಬಲಿಯಾದರಾ ಪ್ರವೀಣ್? ಚಿಕನ್ ಬ್ಯುಸಿನೆಸ್ ಹೋರಾಟದಿಂದ ಪ್ರಾಣಕ್ಕೇ ಕುತ್ತು?

 

Video Top Stories