KRS ಡ್ಯಾಂನಲ್ಲಿ ಬಿರುಕು ಬಿಟ್ಟಿಲ್ಲ ಅನ್ನೋದಾದ್ರೆ ತನಿಖೆ ನಡೆಸಲಿ: ಸುಮಲತಾ ಸವಾಲ್
- ಕೆಆರ್‌ಎಸ್ ಡ್ಯಾಂ ಸೋರಿಕೆ ಬಗ್ಗೆ ತನಿಖೆಗೆ ಅವಕಾಶ ಕೊಡುತ್ತಿಲ್ಲ: ಸುಮಲತಾ
- ಕಾವೇರಿ ನಿಗಮದ ಅಧಿಕಾರಿಗಳೇ ಬಿರುಕು ಬಿಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ.
- ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ 67 ಕೋಟಿ ವೆಚ್ಚದಲ್ಲಿ ಡ್ಯಾಂ ದುರಸ್ತಿ ನಡೆದಿದೆ.
ಬೆಂಗಳೂರು (ಜು. 05): 'ಕೆಆರ್‌ಎಸ್ ಡ್ಯಾಂ ಸೋರಿಕೆ ಬಗ್ಗೆ ತನಿಖೆಗೆ ಅವಕಾಶ ಕೊಡುತ್ತಿಲ್ಲ. ನಾನು ನಿಜವಾದ ಕಾಳಜಿಯಿಂದ ತನಿಖೆಗೆ ಆಗ್ರಹಿಸಿದ್ದೇನೆ. ಕಾವೇರಿ ನಿಗಮದ ಅಧಿಕಾರಿಗಳೇ ಬಿರುಕು ಬಿಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ 67 ಕೋಟಿ ವೆಚ್ಚದಲ್ಲಿ ಡ್ಯಾಂ ದುರಸ್ತಿ ನಡೆದಿದೆ. ಭ್ರಷ್ಟಾಚಾರದ ವಿರುದ್ದ ದ್ವನಿ ಎತ್ತಿದಾಗ, ನನ್ನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ' ಎಂದು ಸುಮಲತಾ ಹೇಳಿದ್ಧಾರೆ.