ಮೈಷುಗರ್ ಖಾಸಗೀಕರಣ ವಿಚಾರ: ಎಚ್‌ಡಿಕೆ ಹೇಳಿಕೆಗೆ ಸುಮಲತಾ ತಿರುಗೇಟು
- ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕೆಂದು ನಾನು ಹೇಳಿಲ್ಲ: ಸುಮಲತಾ
- ಸರ್ಕಾರವೇ ನೋಡಿಕೊಂಡರೂ ನಾನದನ್ನು ಒಪ್ಪಿಕೊಳ್ಳುತ್ತೇನೆ
- ಎಚ್‌ಡಿಕೆ ಯಾಕೆ ಹಾಗೆ ಹೇಳಿಕೆ ಕೊಡ್ತಿದ್ದಾರೋ ಗೊತ್ತಿಲ್ಲ
ಬೆಂಗಳೂರು (ಜು. 05): 'ಮೈಷುಗರ್ ಕಾರ್ಖಾನೆಯನ್ನು ಯಾವುದಾದರೂ ಒಂದು ರೂಪದಲ್ಲಿ ಓಪನ್ ಮಾಡಿ ಎಂದು ನಾನು ಸಿಎಂಗೆ ಮನವಿ ಮಾಡಿದ್ದೆ. ಅದನ್ನು ಖಾಸಗೀಕರಣ ಮಾಡ್ತಾರೋ, ಸರ್ಕಾರವೇ ಮಾಡುತ್ತೋ ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದಿದ್ದೆ. ನನ್ನ ಸಲಹೆ ಮೇರೆಗೆ ನಿರ್ಧಾರ ತೆಗೆದುಕೊಳ್ಳುವಷ್ಟು ನಾನು ದೊಡ್ಡವಳಲ್ಲ. ಎಚ್‌ಡಿಕೆಯವರು ಯಾಕೆ ಅ ರೀತಿ ಮಾತಾಡ್ತಾ ಇದಾರೋ ಅವರನ್ನೇ ಕೇಳಬೇಕು' ಎಂದು ಸುಮಲತಾ ಹೇಳಿದ್ದಾರೆ. ಸರ್ಕಾರವೇ ವಹಿಸಿಕೊಂಡರೂ, ಖಾಸಗೀಕರಣ ಮಾಡಿದರೂ, ಬೇರೆ ಪರ್ಯಾಯ ವ್ಯವಸ್ಥೆ ಮಾಡಿದರೂ ನಾನು ಒಪ್ಪಿಕೊಳ್ಳುತ್ತೇನೆ' ಎಂದಿದ್ಧಾರೆ.
KRS ಡ್ಯಾಂನಲ್ಲಿ ಬಿರುಕು ಬಿಟ್ಟಿಲ್ಲ ಅನ್ನೋದಾದ್ರೆ ತನಿಖೆ ನಡೆಸಲಿ: ಸುಮಲತಾ ಸವಾಲ್
ಇನ್ನೊಂದು ಕಡೆ ಮೈಷುಗರ್ ಕಂಪನಿಯನ್ನು ಖಾಸಗೀಕರಣ ಮಾಡಬಾರದೆಂದು ಎಚ್‌ಡಿಕೆ, ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದಾರೆ.