Siddaramaiah: ದೇಶದ ಪ್ರಥಮ ಪ್ರಜೆಯ ಬಗ್ಗೆ ಸಿದ್ದು ಏಕವಚನ ಪ್ರಯೋಗಿಸಿದ್ದೇಕೆ..?

ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಅಚಾತುರ್ಯ..!
"ಬಾಯ್ತಪ್ಪಿ ಬಂದ ಮಾತಿಗೆ ವಿಷಾದವಿದೆ" ಅಂದ್ರು ಸಿದ್ದರಾಮಯ್ಯ
"ಆಡು ಭಾಷೆಯಲ್ಲಿ ಆಡಿದ ಮಾತೇ" ಸಿದ್ದು ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ..!

First Published Jan 30, 2024, 6:31 PM IST | Last Updated Jan 30, 2024, 6:31 PM IST

ರಾಜಕೀಯ ವೈರಿಗಳಿಗೆ ಟಕ್ಕರ್ ಕೊಡೋದಕ್ಕೂ ಸೈ, ಕೌಂಟರ್ ಕೊಡೋದಕ್ಕೂ ಸೈ ಮಾತಿನಮಲ್ಲ ಸಿದ್ದರಾಮಯ್ಯ(Siddaramaiah). ಮಾತಿಗೆ ನಿಂತ್ರೆ ಸಿನಿಮಾ ಹೀರೋಗಳನ್ನೇ ಮೀರಿಸೋ ಡೈಲಾಗ್ ಕಿಂಗ್. ಅದೇ ಜೋಶ್‌ನಲ್ಲಿ ನುಗ್ಗಿ ಬರತ್ತೆ ಏಕವಚನದ ಅಸ್ತ್ರ. ದೇಶದ ಪ್ರಧಾನಿಯನ್ನೇ ಬಿಡದ ಸಿದ್ದು ಏಕವಚನ ಪ್ರಯೋಗಕ್ಕೆ ಟಾರ್ಗೆಟ್ ಆದ್ರು ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿಗಳ(President) ಬಗ್ಗೆಯೇ ಏಕವಚನದಲ್ಲಿ ಮಾತಾಡಿದ್ರು ಸಿಎಂ ಸಿದ್ದರಾಮಯ್ಯ. ಸಿದ್ದುಗೆ ಕೌಂಟರ್ ಕೊಟ್ಟವರಿಂದಲೂ ಅದೇ ಧಾಟಿಯ ಉತ್ತರ. ರಾಜ್ಯ ರಾಜಕಾರಣದಲ್ಲಿ ಮತ್ತೆ ಏಕವಚನ ಪಾಲಿಟಿಕ್ಸ್ ಸದ್ದು ಮಾಡ್ತಾ ಇದೆ. ಏಕವಚನ ಪ್ರವೀಣ ಅಂತಾನೇ ಫೇಮಸ್ ಆಗಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ತಮ್ಮ ಏಕವಚನದ ಮಾತಿನಿಂದ ಸುದ್ದಿಯಲ್ಲಿದ್ದಾರೆ. ಈಗ ಸಿದ್ದರಾಮಯ್ಯನವರು ರಾಷ್ಟ್ರಪತಿಗಳ ಬಗ್ಗೆಯೇ ಏಕವಚನ ಪ್ರಯೋಗ ಮಾಡಿದ್ದಾರೆ. ಭಾನುವಾರ ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಮಾತಾಡ್ತಾ, ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಬಗ್ಗೆ ಏಕವಚನ ಪ್ರಯೋಗ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಇದನ್ನೂ ವೀಕ್ಷಿಸಿ:  Hanuman Flag Row : ಹನುಮನಿಗಾಗಿ ಹರಿದೇಬಿಟ್ಟಿತ್ತಲ್ಲ ರಕ್ತ..! ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಧ್ವನಿಸಿದ ಧಿಕ್ಕಾರ..!

 

Video Top Stories