‘ಏನ್ ಕಂಬಳಿ ರೀ, ಏನ್ ಅಂವಾ ಕುರುಬರಲ್ಲಿ ಹುಟ್ಟಿದ್ದಾನಾ?’ ಸಿಎಂಗೆ ಸಿದ್ದು ಗುದ್ದು.!
ಸಿಂದಗಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ಧಾರೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶತಾಯ ಗತಾಯ ಕಾಂಗ್ರೆಸ್ಸನ್ನು ಗೆಲ್ಲಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ.
ಬೆಂಗಳೂರು (ಅ.26): ಸಿಂದಗಿ ಉಪಚುನಾವಣೆಯಲ್ಲಿ (Sindagi) ಸಿದ್ದರಾಮಯ್ಯ (Siddaramaiah) ಭರ್ಜರಿ ಪ್ರಚಾರ ನಡೆಸುತ್ತಿದ್ಧಾರೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶತಾಯ ಗತಾಯ ಕಾಂಗ್ರೆಸ್ಸನ್ನು ಗೆಲ್ಲಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಇರಬೇಕು ಎಂಬ ಸಿಎಂ ಹೇಳಿಕೆ ಬಗ್ಗೆ ಉತ್ತರಿಸಿದ ಸಿದ್ದರಾಮಯ್ಯ, ಏನ್ ಅವಾ ಕುರುಬರಲ್ಲಿ ಹುಟ್ಟಿದ್ದಾನಾ? ನಾನು ಕುರುಬರಲ್ಲಿ ಹುಟ್ಟಿದವನು ಎಂದು ಏಕವಚನದಲ್ಲೇ ಹರಿಹಾಯ್ದರು.
ಆಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ: ಜಮೀರ್‌ಗೆ ಎಚ್‌ಡಿಕೆ ಸವಾಲ್..!
ಇದೇ ವೇಳೆ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಮುಗಿಸಲು ಮುಂದಾಗಿವೆ ಎಂಬ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯಾವುದೇ ವಿಚಾರವಿಲ್ಲ. ಅವರ ನಡವಳಿಕೆಗಳಿಂದ ಅವರ ತತ್ವ, ಸಿದ್ಧಾಂತ ಇಲ್ಲದೆ ಅವರೇ ಮುಗಿದು ಹೋಗುತ್ತಾರೆ. ಅವರು ಸುಮ್ಮನೆ ಹೇಳುತ್ತಿದ್ದಾರೆ. ನಾವು ಏಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೋಗೋಣ? ಅವರ ನಡವಳಿಕೆ, ತತ್ವ, ಸಿದ್ಧಾಂತಗಳಿಂದ ಅವರೇ ಮುಗಿದು ಹೋಗುತ್ತಾರೆ ಎಂದರು.