ACB Raid: ಬಗೆದಷ್ಟು ಸಿಗ್ತಿದೆ 'ಕಲಬುರಗಿ ಕುಬೇರ'ನ ಸಂಪತ್ತು: ತಂದೆಗಿಂತ ಮಗನ ಅಕೌಂಟ್‌ನಲ್ಲೇ ಹೆಚ್ಚು ಹಣ

*  ಹಲವು ಬ್ಯಾಂಕ್‌ ಅಕೌಂಟ್‌ಗಳ ಶೋಧ 
*  ಶಾಂತಗೌಡ ಹಾಗೂ ಮಗನ ಹೆಸರಲ್ಲಿ ಬರೋಬ್ಬರಿ 16 ಖಾತೆಗಳು ಪತ್ತೆ
* ಮೂರು ಬ್ಯಾಂಕ್‌ ಖಾತೆಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಹಣ ಪತ್ತೆ 

First Published Nov 26, 2021, 11:11 AM IST | Last Updated Nov 26, 2021, 11:11 AM IST

ಕಲಬುರಗಿ(ನ.26): ಇಂದೂ ಕೂಡು ಎಂಜಿನೀಯರ್‌ ಶಾಂತಗೌಡ ಬಿರಾದರ್‌ ಬ್ಯಾಂಕ್‌ ಅಕೌಂಟ್‌ ಶೋಧಕಾರ್ಯ ನಡೆಯಲಿದೆ. ನಿನ್ನೆ(ಗುರುವಾರ) ಕೇವಲ ಮೂರು ಬ್ಯಾಂಕ್‌ ಖಾತೆಗಳ ಬಗ್ಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇವತ್ತು ಹಲವು ಬ್ಯಾಂಕ್‌ ಅಕೌಂಟ್‌ಗಳ ಶೋಧ ನಡೆಯಲಿದೆ ಎಂದು ತಿಳುದು ಬಂದಿದೆ.   ಅಪ್ಪನ ಖಾತೆಗಿಂತ ಮಗನ ಖಾತೆಯಲ್ಲೇ ಹೆಚ್ಚು ಹಣ ಪತ್ತೆಯಾಗಿದೆ. 

ACB Raid: ಭ್ರಷ್ಟರಿಗೆ ಮತ್ತೊಂದು ಶಾಕ್, ಎಸಿಬಿ ದಾಳಿ ಬಳಿಕ ಇ,ಡಿ ಎಂಟ್ರಿ!

ಶಾಂತಗೌಡ ಹಾಗೂ ಮಗನ ಹೆಸರಲ್ಲಿ ಬರೋಬ್ಬರಿ 16 ಖಾತೆಗಳು ಪತ್ತೆಯಾಗಿವೆ. ಬೆಂಗಳೂರು, ಕಲಬುರಗಿ ಸೇರಿ ಹಲವೆಡೆ ಬ್ಯಾಂಕ್‌ ಅಕೌಂಟ್‌ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಗೌಡ ಪುತ್ರನ ಬ್ಯಾಂಕ್‌ ಅಕೌಂಟ್‌ಗಳನ್ನೂ ಸಹ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.  ಶಾಂತಗೌಡ ಮನೆಯಲ್ಲಿ 54 ಲಕ್ಷ ರೂ. ಸೀಜ್‌ ಮಾಡಿ ಖಜಾನೆಗೆ ಒಪ್ಪಿಸಿದೆ ಎಸಿಬಿ ತಂಡ. ನಿನ್ನೆ ಮೂರು ಬ್ಯಾಂಕ್‌ ಖಾತೆಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ. 
 

Video Top Stories