Shivamogga: ಎಸ್‌ಪಿ, ಡಿಸಿಗಳಿಂದ ಮಾಹಿತಿ ಪಡೆದಿದ್ಧೇನೆ, ತನಿಖೆ ತೀವ್ರಗೊಂಡಿದೆ: ನಾರಾಯಣ ಗೌಡ

ಶಿವಮೊಗ್ಗ (Shivamogga) ಘಟನೆ ಬಗ್ಗೆ ಎಸ್‌ಪಿ, ಡಿಸಿಗಳ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಪೊಲೀಸರ ಬಂಧಿಸಲಿದ್ದಾರೆ. ಗೃಹ ಸಚಿವರು ಶಿವಮೊಗ್ಗದಲ್ಲೇ ಇದ್ದಾರೆ. ಸದನ ಇರುವುದರಿಂದ ನಾನು ಬೆಂಗಳೂರಿನಲ್ಲಿದ್ದೇನೆ ' ಎಂದು ಶಿವಮೊಗ್ಗ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ. 

First Published Feb 21, 2022, 2:53 PM IST | Last Updated Feb 21, 2022, 2:53 PM IST

ಶಿವಮೊಗ್ಗ (ಫೆ. 21):  ಹಿಂದೂಪರ ಕಾರ್ಯಕರ್ತನೊಬ್ಬನನ್ನು (Right Wing Activist) ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. 

ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಬಾಲ ಬಿಚ್ಚಿದ್ದಾರೆ, ನಾವು ಅವಕಾಶ ಕೊಡಲ್ಲ: ಈಶ್ವರಪ್ಪ

ಘಟನೆ ಬಗ್ಗೆ ಎಸ್‌ಪಿ, ಡಿಸಿಗಳ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಪೊಲೀಸರ ಬಂಧಿಸಲಿದ್ದಾರೆ. ಗೃಹ ಸಚಿವರು ಶಿವಮೊಗ್ಗದಲ್ಲೇ ಇದ್ದಾರೆ. ಸದನ ಇರುವುದರಿಂದ ನಾನು ಬೆಂಗಳೂರಿನಲ್ಲಿದ್ದೇನೆ  ಎಂದು ಶಿವಮೊಗ್ಗ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ. 

Video Top Stories