PSI Recruitment Scam ಆಯ್ಕೆಯಾದ ಎಲ್ಲಾ 545 ಅಭ್ಯರ್ಥಿಗಳಿಗೆ ಸಿಐಡಿ ನೊಟೀಸ್
ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಪರೀಕ್ಷೆ ಬರೆದು ಆಯ್ಕೆಯಾದ 545 ಅಭ್ಯರ್ಥಿಗಳಿಗೆ OMR ಶೀಟ್ ಜೊತೆಗೆ ಸಿಐಡಿಗೆ ಹಾಜರಾಗಲು ಸೂಚನೆ ಹೊರಡಿಸಿದೆ.
ಕಲಬುರಗಿ (ಏ.19): 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಬಗೆದಷ್ಟೂ ತೆರೆದುಕೊಳ್ಳುತ್ತಿದೆ. ಪಿಎಸ್‌ಐ ಪರೀಕ್ಷೆ ನಡೆದ ಕಲಬುರಗಿ ನಗರದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸಿಸಿ ಕ್ಯಾಮೆರಾವನ್ನು ಅರ್ಧ ಗಂಟೆ ಸ್ಥಗಿತಗೊಳಿಸಿ ಪರೀಕ್ಷಾ ಅಕ್ರಮ ಎಸಗಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
PSI Recruitment Scam ಸಿಸಿಟೀವಿ ಆಫ್ ಮಾಡಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ!
ಇದರ ಬೆನ್ನಲ್ಲೇ ಪರೀಕ್ಷೆ ಬರೆದು ಆಯ್ಕೆಯಾದ 545 ಅಭ್ಯರ್ಥಿಗಳಿಗೆ OMR ಶೀಟ್ ಜೊತೆಗೆ ಸಿಐಡಿಗೆ (Criminal Investigation Department -CID) ಹಾಜರಾಗಲು ಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿದೆ. 2021ರ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪಿಎಸ್‌ಐ ಆಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು ಅಕ್ರಮ ಎಸಗಿರುವುದನ್ನು ‘ಕನ್ನಡಪ್ರಭ’ ಎಳೆಎಳೆಯಾಗಿ ಬಿಡಿಸಿಟ್ಟಿತ್ತು.