Asianet Suvarna News Asianet Suvarna News

PSI ನೇಮಕಾತಿ ಹಗರಣ: ಪಾಟೀಲ್ ಬ್ರದರ್ಸ್ ಮನೆಯಲ್ಲಿ ರಾಶಿ ರಾಶಿ ಹಾಲ್‌ ಟಿಕೆಟ್ ಪತ್ತೆ

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ (PSI Recruitment Scam)ಸಂಬಂಧಿಸಿದಂತೆ ಸಾಲು ಸಾಲು ಪುರಾವೆ ಸಿಕ್ಕಿದೆ. ಅಕ್ರಮದ ಹಿಂದೆ ಬಹುದೊಡ್ಡ ಜಾಲವೇ ಅಡಗಿದೆ. ಸಿಐಡಿ ತನಿಖೆಯಲ್ಲಿ (CID probe) ಹಂತಹಂತವಾಗಿ ಕರ್ಮಕಾಂಡಗಳು ಬಯಲಾಗುತ್ತಿವೆ. 

ಬೆಂಗಳೂರು (ಏ. 24): ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ (PSI Recruitment Scam)ಸಂಬಂಧಿಸಿದಂತೆ ಸಾಲು ಸಾಲು ಪುರಾವೆ ಸಿಕ್ಕಿದೆ. ಅಕ್ರಮದ ಹಿಂದೆ ಬಹುದೊಡ್ಡ ಜಾಲವೇ ಅಡಗಿದೆ. ಸಿಐಡಿ ತನಿಖೆಯಲ್ಲಿ (CID probe) ಹಂತಹಂತವಾಗಿ ಕರ್ಮಕಾಂಡಗಳು ಬಯಲಾಗುತ್ತಿವೆ.

ಕಲಬುರಗಿಯ ಪಾಟೀಲ್ ಬ್ರದರ್ಸ್ ಮನೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ರಾಶಿ ರಾಶಿ ಹಾಲ್‌ ಟಿಕೆಟ್ ಮತ್ತೆಯಾಗಿದೆ. ಮಹಾಂತೇಶ್ ಪಾಟೀಲ್, ಆರ್‌ಡಿ ಪಾಟೀಲ್ ಪಾಲು ದೊಡ್ಡದಿದೆ. ಅಫಜಲ್‌ಪುರ ಟು ಬೆಂಗಳೂರಿನವರೆಗೆ ಪಾಟೀಲ್ ನೆಟ್‌ವರ್ಕ್ ಇದೆ. ಇವರ ಆಸ್ತಿ, ಜೀವನ ಶೈಲಿ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. 
 

Video Top Stories