ಪ್ರವೀಣ್ ಹತ್ಯೆಗೂ ಮುನ್ನ ಸ್ಟ್ರೀಟ್ ಲೈಟ್ ಆಫ್ ಮಾಡಿದ್ದರು ಹಂತಕರು
ಪ್ರವೀಣ್ ಹತ್ಯೆಯ ಬಳಿಕ ಸುಳಿವು ಸಿಗಬಾರದೆಂದು ಹಂತಕರು ಸ್ಟ್ರೀಟ್ ಲೈಟನ್ನು ಆಫ್ ಮಾಡಿದ್ದರು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಮುತ್ತ ಪವರ್ ಕಟ್ ಮಾಡಿದ್ದರು. ನಂತರ ಹತ್ಯೆ ಮಾಡಿದ್ದರು. ಹಾಗಾಗಿ ಸಿಸಿಟಿವಿ ಕ್ಯಾಮೆರಾದಲ್ಲೂ ಹಂತಕರೆ ಚಹರೆ ಸಿಕ್ಕಿಲ್ಲ.
ಬೆಂಗಳೂರು (ಆ.01): ಪ್ರವೀಣ್ ಹತ್ಯೆಯ ಬಳಿಕ ಸುಳಿವು ಸಿಗಬಾರದೆಂದು ಹಂತಕರು ಸ್ಟ್ರೀಟ್ ಲೈಟನ್ನು ಆಫ್ ಮಾಡಿದ್ದರು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಮುತ್ತ ಪವರ್ ಕಟ್ ಮಾಡಿದ್ದರು. ನಂತರ ಹತ್ಯೆ ಮಾಡಿದ್ದರು. ಹಾಗಾಗಿ ಸಿಸಿಟಿವಿ ಕ್ಯಾಮೆರಾದಲ್ಲೂ ಹಂತಕರೆ ಚಹರೆ ಸಿಕ್ಕಿಲ್ಲ.
Exclusive:ಪಾಝಿಲ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಕೈವಾಡ, ಪ್ಲ್ಯಾನ್ ಹೇಗಿತ್ತು ಗೊತ್ತಾ.?
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಶಂಕಿತ ತಲಶ್ಶೇರಿ ನಿವಾಸಿ ಅಬೀದ್‌ನನ್ನುವಿಶೇಷ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಘಟನೆಯಲ್ಲಿ ಅಬೀದ್‌ನ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಕ್ಕೆ ಪೊಲೀಸ್ ತಂಡ ಮುಂದಾಗಿರುವ ಹಿನ್ನೆಲೆಯಲ್ಲಿ ಆತನನ್ನು ಕೇರಳ ಪೊಲೀಸರ ಸಹಕಾರದಲ್ಲಿ ಅಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ. ಈ ಹತ್ಯೆ ಘಟನೆಗೆ ಸಂಬಂಧಿಸಿ ಈಗಾಗಲೇ ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಫೀಕ್ ಎಂಬಿಬ್ಬರನ್ನು ಪೊಲೀಸ್ ತಂಡ ಬಂಧಿಸಿದ್ದು, ಬಂಧಿತರಿಗೆ ಶನಿವಾರ ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.