Exclusive: ಫಾಝಿಲ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಕೈವಾಡ, ಪ್ಲ್ಯಾನ್ ಹೇಗಿತ್ತು ಗೊತ್ತಾ.?

ಸುರತ್ಕಲ್ ಫಾಸಿಲ್ ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಕೈವಾಡ ಇದೆ ಎನ್ನಲಾಗಿದೆ. ಈತನೇ ಕೊಲೆಯ ರೂವಾರಿ ಆಗಿದ್ದ. ಫಾಸಿಲ್ ಹತ್ಯೆ ವೇಳೆ ಚಾಲಕ ಕಾರಿನಲ್ಲೇ ಇರಬೇಕು. ಹತ್ಯೆ ಬಳಿಕ ಕೂಡಲೇ ಪರಾರಿಯಾಗಬೇಕು ಎಂದು ಪ್ಲ್ಯಾನ್ ಮಾಡಿದ್ದರು. 

First Published Aug 1, 2022, 10:40 AM IST | Last Updated Aug 1, 2022, 10:40 AM IST

ಮಂಗಳೂರು (ಆ. 01): ಸುರತ್ಕಲ್ ಫಾಸಿಲ್ ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಕೈವಾಡ ಇದೆ ಎನ್ನಲಾಗಿದೆ. ಈತನೇ ಕೊಲೆಯ ರೂವಾರಿ ಆಗಿದ್ದ. ಫಾಸಿಲ್ ಹತ್ಯೆ ವೇಳೆ ಚಾಲಕ ಕಾರಿನಲ್ಲೇ ಇರಬೇಕು. ಹತ್ಯೆ ಬಳಿಕ ಕೂಡಲೇ ಪರಾರಿಯಾಗಬೇಕು. ಪರಾರಿಯಾಗುವಾಗ ರಸ್ತೆ ಮಾರ್ಗ ಬದಲಿಸಿದ್ದರು. ಬಂಟ್ವಾಳ, ಉಡುಪಿಯಲ್ಲೆಲ್ಲಾ ಓಡಾಡಿ ಆ ನಂತರ ಕಾರ್ಕಾಳದ ಮನ್ನಾ ಗ್ರಾಮದಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗುತ್ತಾರೆ. 

ಮಂಗಳೂರಿನ ಆರ್‌ಟಿಒ ನೋಂದಣಿಯ ಕಾರು ಇದಾಗಿದ್ದು, ಗ್ಲಾನ್ಸಿ ಡಿಂಪಲ್‌ ಡಿಸೋಜ ಹೆಸರಿನಲ್ಲಿ ನೋಂದಣಿ ಆಗಿದೆ. ಈ ಕುರಿತು ಮಂಗಳೂರು ಹಾಗೂ ಉಡುಪಿ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಾರು ಪತ್ತೆಗೂ ಮುನ್ನವೇ ಮಾಲೀಕನನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. 

Video Top Stories