ಎಣ್ಣೆ ಹೊಡ್ಯೋಕೆ ಹೋಗ್ಬೇಕು, ನಾಳೆ ಬಂದು ವ್ಯಾಕ್ಸಿನ್ ತಗೋತೀನಿ, ಯುವಕನ ವರಸೆಗೆ ಅಧಿಕಾರಿಗಳು ಸುಸ್ತು!

ಯಾದಗಿರಿ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕುತ್ತಿದ್ದಾರೆ. ಹೆಡಗಿಮುದ್ರಾ ಗ್ರಾಮಕ್ಕೆ ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಯನ್ನು ನೋಡಿ ಯುವಕನೊಬ್ಬ ಓಟ ಕಿತ್ತಿದ್ದಾನೆ. 

First Published Oct 5, 2021, 6:00 PM IST | Last Updated Oct 5, 2021, 6:00 PM IST

ಯಾದಗಿರಿ (ಅ. 05): ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕುತ್ತಿದ್ದಾರೆ. ಹೆಡಗಿಮುದ್ರಾ ಗ್ರಾಮಕ್ಕೆ ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಯನ್ನು ನೋಡಿ ಯುವಕನೊಬ್ಬ ಓಟ ಕಿತ್ತಿದ್ದಾನೆ.

ಕವರ್‌ಸ್ಟೋರಿ ಇಂಪ್ಯಾಕ್ಟ್ : ಅಸ್ಪೃಶ್ಯತೆ ಜೀವಂತವಾಗಿರುವ ಚಿತ್ರದುರ್ಗದ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

ಇನ್ನು ವ್ಯಾಕ್ಸಿನ್ ತೆಗೆದುಕೊಳ್ಳಲು ಜನ ಸುಳ್ಳು ನೆಪ ಹೇಳುತ್ತಿದ್ದಾರೆ. ಮಾತ್ರೆ ತೆಗೆದುಕೊಂಡಿದ್ದೇನೆ, ಎಣ್ಣೆ ಹೊಡೆಯೋಕೆ ಹೋಗಬೇಕು, ನಾಳೆ ಬಂದು ತೆಗೆದುಕೊಳ್ಳುತ್ತೇನೆ ಎಂದು ಯುವಕ ಕಾರಣ ಕೊಟ್ಟಿದ್ದಾನೆ. ಯುವಕನ ವರಸೆ ನೋಡಿ ಅಧಿಕಾರಿಗಳು ಸುಸ್ತೋ ಸುಸ್ತು..!