Asianet Suvarna News Asianet Suvarna News

Omicron Threat ಕಾಸು ಕೊಟ್ರೆ ನೋ ಚೆಕ್ಕಿಂಗ್, ನೋ ನೆಗೆಟಿವ್ ರಿಪೋರ್ಟ್, ಚೆಕ್‌ಪೋಸ್ಟ್‌ಗಳಲ್ಲಿ ದಂಧೆ

Dec 7, 2021, 1:37 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 07): ರಾಜ್ಯದಲ್ಲಿ ಒಮಿಕ್ರಾನ್ ಭೀತಿ (Omicron Threat) ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ತೀವ್ರ ಅಲರ್ಟ್ ವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ (negative Report) ಕಡ್ಡಾಯಗೊಳಿಸಲಾಗಿದೆ.  ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡಲಾಗುತ್ತದೆ. ಆದರೆ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. 

Omicron Threat ಸೋಂಕು ಇಲ್ಲದ ಕಲಬುರ್ಗಿಯಲ್ಲಿ ಒಮಿಕ್ರಾನ್ ಭೀತಿ

ದುಡ್ಡು ಕೊಟ್ರೆ ನೋ ನೆಗೆಟಿವ್ ರಿಪೋರ್ಟ್, ನೋ ಚೆಕ್ಕಿಂಗ್. ಸಲೀಸಾಗಿ ಒಳಗೆ ಬಿಡುತ್ತಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಈ ವಸೂಲಿ ಸೆರೆಯಾಗಿದೆ. 100, 200 ರೂಪಾಯಿಗಾಗಿ ಸಿಬ್ಬಂದಿಗಳು ವಸೂಲಿಗಿಳಿದಿದ್ದಾರೆ. ನಮ್ಮ ಕ್ಯಾಮೆರಾ ಕಂಡ ಕೂಡಲೇ, ಅಲರ್ಟ್ ಆಗಿ, ಚೆಕ್ಕಿಂಗ್ ಶುರು ಮಾಡಿದ್ದಾರೆ. 

Video Top Stories