ಕರ್ನಾಟಕದಲ್ಲೂ ಮುಂದುವರಿದ ಮರಣ ಮೃದಂಗ: ಟ್ರಾವೆಲ್ ಹಿಸ್ಟರಿಯೇ ಇಲ್ಲದ ವ್ಯಕ್ತಿ ಸಾವು

ಮಂಗಳವಾರ ಅಷ್ಟೇ ಮೂರು ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಇಂದು (ಬುಧವಾರ) ರಾಜ್ಯದಲ್ಲಿ ಮತ್ತೊಂದು ಕೊರೋನಾಗೆ ಬಲಿಯಾಗಿದೆ. 
First Published Apr 15, 2020, 3:23 PM IST | Last Updated Apr 15, 2020, 3:24 PM IST

ಚಿಕ್ಕಬಳ್ಳಾಪುರ, (ಏ.15): ಮಾರಣಾಂತಿಕ ಕೋವಿಡ್ 19 ಮಹಾಮಾರಿ ಜಗತ್ತಿನಾದ್ಯಂತ ಮರಣ ಮೃದಂಗ ಮುಂದುವರಿಸಿದ್ದು, ಇದೀಗ ಕರ್ನಾಟಕದಲ್ಲೂ ಮರಣ ಮೃದಂಗ ಮುಂದುವರಿಸಿತೇ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ. 

ದೆಹಲಿ ನಿಜಾಮುದ್ದೀನ್ ಆಯ್ತು, ಈಗ ಸರ್ಕಾರಕ್ಕೆ ನಿದ್ದೆಗೆಡಿಸಿದ ಮೈಸೂರಿನ ಜ್ಯುಬಿಲಿಯಂಟ್‌ ಕಾರ್ಖಾನೆ

ಮಂಗಳವಾರ ಅಷ್ಟೇ ಮೂರು ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಇಂದು (ಬುಧವಾರ) ರಾಜ್ಯದಲ್ಲಿ ಮತ್ತೊಂದು ಕೊರೋನಾಗೆ ಬಲಿಯಾಗಿದೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕಿತರ ಜತೆ ಸಾವಿನ ಸಂಖ್ಯೆಯಲ್ಲೂ ಸಹ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಬುಧವಾರ ಮೃತಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯೇ ಇಲ್ಲ.