Asianet Suvarna News Asianet Suvarna News

'ಸುಧಾಕರ್‌ ನಾಲಾಯಕ್‌ ಮಂತ್ರಿ, ಕೊರೋನಾದಲ್ಲಿ ಮೋಜು, ಮಸ್ತಿ ಮಾಡ್ಕೊಂಡು ತಿರುಗಾಡ್ತಿದ್ದಾರೆ'

ಸುಧಾಕರ್‌ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ| ಇವರ ಹಗರಣ ಹೊರತರದಿದ್ರೆ ನಾವು ಒಳ್ಳೆಯವರು, ವಿಚಾರ ತೆಗೆದ್ರೆ ನಾವು ಕೆಟ್ಟವರು| ಸಚಿವ ಸುಧಾಕರ್‌ ವಿರುದ್ಧ ಆಕ್ರೋಷ ಹೊರಹಾಕಿದ ಡಿ.ಕೆ.ಸುರೇಶ್‌| 

First Published Dec 24, 2020, 3:21 PM IST | Last Updated Dec 24, 2020, 3:21 PM IST

ಬೆಂಗಳೂರು(ಡಿ.24): ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ನಾಲಾಯಕ್‌ ಮಂತ್ರಿ, ಕೊರೋನಾ ಟೈಂನಲ್ಲಿ ಮೋಜು, ಮಸ್ತಿ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಸುಧಾಕರ್‌ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ ಎಂದು ಎಂದು ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸುಧಾರ್ ವಿರುದ್ಧ ಮುಗಿಬಿದ್ದ ಅಣ್ತಮ್ಮಾಸ್...!

ಇವರ ಹಗರಣ ಹೊರತರದಿದ್ರೆ ನಾವು ಒಳ್ಳೆಯವರು, ವಿಚಾರ ತೆಗೆದ್ರೆ ನಾವು ಕೆಟ್ಟವರು, ಸರ್ವಪಕ್ಷ ಸಭೆಯಲ್ಲಿ ಸಲಹೆ ಕೊಟ್ರೆ ಕಾಲ್‌ ಸಮ, ಸಲಹೆ ಕೊಡೋಕೆ ಸಭೆಗೆ ಕರೀತಾರೆ, ಏನು ನಿರ್ಧಾರ ತೆಗೆದುಕೊಳ್ಳಬೇಕು ಅಂತ ಅವರಿಗೆ ಗೊತ್ತಾಗಲ್ಲ ಎಂದು ಸಚಿವ ಸುಧಾಕರ್‌ ವಿರುದ್ಧ ತಮ್ಮ ಆಕ್ರೋಷವನ್ನ ಹೊರಹಾಕಿದ್ದಾರೆ. 
 

Video Top Stories