ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ

ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ ಹಿಂದೂ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸಿರುವುದು 4 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್‌ಗೆ ಅಡ್ಡಗಟ್ಟಿ ಮುಸ್ಲಿಂ ಯುವಕನಿಗೆ ಹೊಡೆಯಲು ಯತ್ನಿಸಿದ್ಧಾರೆ. 

First Published Oct 10, 2021, 4:18 PM IST | Last Updated Oct 10, 2021, 4:18 PM IST

ಮಂಡ್ಯ (ಅ. 10): ಸುಂಡಹಳ್ಳಿ ಬಳಿ ಹಿಂದೂ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸಿರುವುದು 4 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್‌ಗೆ ಅಡ್ಡಗಟ್ಟಿ ಮುಸ್ಲಿಂ ಯುವಕನಿಗೆ ಹೊಡೆಯಲು ಯತ್ನಿಸಿದ್ಧಾರೆ. ಶ್ರೀರಂಗಪಟ್ಟಣದಿಂದಲೂ ಕಾರ್ಯಕರ್ತರು ಇವರನ್ನು ಹಿಂಬಾಲಿಸಿದ್ದಾರೆ. ಯುವಕನಿಗೆ ಹೊಡೆದಿದ್ದಾರೆ. ಯುವತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. 

ಮೂಡಬಿದ್ರೆಯಲ್ಲಿ ನೈತಿಕ ಪೊಲೀಸ್‌ಗಿರಿ, ಹಿಂದೂ ಪರ ಕಾರ್ಯಕರ್ತರ ಬಂಧನ