ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ: ಸಚಿವ ಸವದಿ

ಕೋಡಿಹಳ್ಳಿ ಚಂದ್ರಶೇಖರ್‌ ಹಿಂದೆ ಕಾಣದ ಕೈಗಳು| ಇಂದಿನ ಸಭೆ ಯಶಸ್ವಿಯಾಗುತ್ತೆ ಅನ್ನೋ ವಿಶ್ವಾಸ| ಇಂದಿನ ಸಭೆಗೆ ಕೋಡಿಹಳ್ಳಿಗೆ ಆಹ್ವಾನ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ| 

First Published Dec 13, 2020, 12:24 PM IST | Last Updated Dec 13, 2020, 12:26 PM IST

ಬೆಂಗಳೂರು(ಡಿ.13): ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಒಂದು ನಿಗಮಕ್ಕೆ ಮಾಡಿದರೆ ಬೇರೆ ನಿಗಮಗಳ ನೌಕರರು ಬೇಡಿಕೆ ಇಡುತ್ತಾರೆ ಎಂದು ತಿಳಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಬಸ್‌ ಸಿಗದೆ ಮಹಿಳೆಯ ಪರದಾಟ: ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲಾಗದೆ ಕಂಗಾಲು

ಸರ್ಕಾರಿ ನೌಕರರನ್ನಾಗಿ ಮಾಡೋ ಬೇಡಿಕೆ ಬಿಟ್ಟು ಉಳಿದ ಎಲ್ಲ ಬೇಡಿಕೆಗಳನ್ನ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ಸಚಿವರು ಹೇಳಿದ್ದಾರೆ. 
 

Video Top Stories