ಮಳಲಿ ಮಸೀದಿ ವಿವಾದ: ತಾಂಬೂಲ ಪ್ರಶ್ನೆ ಆಯ್ತು, ಕಾನೂನಾತ್ಮಕ ಹೋರಾಟ ಹೇಗಿರಲಿದೆ..?
ಮಳಲಿಯಲ್ಲಿನ ಮಂದಿರ-ಮಸೀದಿ ವಿವಾದಕ್ಕೆ (Malali Masjid Row) ಇದೀಗ ಹೊಸತಿರುವು ಸಿಕ್ಕಿದೆ. ವಿವಾದಿತ ಮಸೀದಿ ಶೈವ ಮಠದ ಸಾನ್ನಿಧ್ಯವಾಗಿತ್ತು. ಹಿಂದೆ ಈ ಜಾಗದಲ್ಲಿ ಶಿವನ ಆರಾಧನೆ ನಡೆಯುತ್ತಿತ್ತು ಎಂಬುದು ಹಿಂದೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೈವಜ್ಞರ ಸಮ್ಮುಖದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಬೆಳಕಿಗೆ ಬಂದಿದೆ.
ಮಳಲಿಯಲ್ಲಿನ ಮಂದಿರ-ಮಸೀದಿ ವಿವಾದಕ್ಕೆ (Malali Masjid Row) ಇದೀಗ ಹೊಸತಿರುವು ಸಿಕ್ಕಿದೆ. ವಿವಾದಿತ ಮಸೀದಿ ಶೈವ ಮಠದ ಸಾನ್ನಿಧ್ಯವಾಗಿತ್ತು. ಹಿಂದೆ ಈ ಜಾಗದಲ್ಲಿ ಶಿವನ ಆರಾಧನೆ ನಡೆಯುತ್ತಿತ್ತು ಎಂಬುದು ಹಿಂದೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೈವಜ್ಞರ ಸಮ್ಮುಖದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಬೆಳಕಿಗೆ ಬಂದಿದೆ. ದೇವರ ಸಾನ್ನಿಧ್ಯ ತಿಳಿದ ಮೇಲೆ ಈ ಜಾಗದಲ್ಲಿ ದೇವರ ಆರಾಧನೆ ಮಾಡುವುದು ಸೂಕ್ತ, ಜಾಗದ ಮಾಲೀಕತ್ವ ಹೊಂದಿರುವವರು ಸೇರಿ ಎಲ್ಲರೂ ಆ ಜಾಗವನ್ನು ಜೀರ್ಣೋದ್ಧಾರ ಮಾಡದಿದ್ದರೆ ಇಡೀ ಊರಿಗೆ ಗಂಡಾಂತರ ಕಾದಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
Karnataka Hijab Row: ಅಮದು ಉಡುಪಿ ಇಂದು ಮಂಗಳೂರು: ಮತ್ತೆ ಶುರುವಾಯ್ತು ಹಿಜಾಬ್ ಫೈಟ್
ಸಮೀಪದ ಇತಿಹಾಸಪ್ರಸಿದ್ಧ ಪೊಳಲಿ ದೇವಸ್ಥಾನಕ್ಕೂ ಸಂಬಂಧ ಇದೆ. ಹಿಂದಿನ ಕಾಲದಲ್ಲಿ ಈ ಸ್ಥಳದಲ್ಲಿ ಗುರು ಮಠದ ಸಾನ್ನಿಧ್ಯ ಇತ್ತು. ಇಲ್ಲಿ ನಡೆದ ತಿಕ್ಕಾಟದ ವೇಳೆ ಒಂದು ಮರಣವೂ ಸಂಭವಿಸಿದೆ. ಸಾನ್ನಿಧ್ಯ ನಾಶಗೊಂಡ ಬಳಿಕ ಪೂರ್ವಜರು ಬೇರೆ ಕಡೆ ತೆರಳಿದ್ದಾರೆ. ಈ ಪ್ರದೇಶದಲ್ಲಿ ಶಿವಕಳೆಯಿದೆ, ಶಿವ ಸಾನ್ನಿಧ್ಯವಿದೆ. ಇಲ್ಲಿ ದೇವರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ನಡೆಯುತ್ತಿದೆ. ಹೀಗಾಗಿ ಮೂಲ ಸ್ಥಳದಲ್ಲಿ ಇರೋ ದೇವ ಸಾನ್ನಿಧ್ಯಕ್ಕೆ ಕಳೆ ಇದೆ. ಇಲ್ಲಿ ಗುರು ಆರಾಧನೆಯ ಜತೆಗೆ ದೇವಿ ಆರಾಧನೆಯೂ ನಡೆಯುತ್ತಿತ್ತು ಎನ್ನಲಾಗಿದೆ. ಇವು ಧಾರ್ಮಿಕ ಅಂಶಗಳಾದರೆ, ಇದರ ಬಗ್ಗೆ ಹಿಂದೂ ಸಂಘಟನೆಗಳು ಹೇಗೆ ಕಾನೂನು ಹೋರಾಟ ನಡೆಸುತ್ತವೆ..? ತಾಂಬೂಲ ಆಯ್ತು, ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.