Karnataka Hijab Row: ಅಂದು ಉಡುಪಿ ಇಂದು ಮಂಗಳೂರು: ಮತ್ತೆ ಶುರುವಾಯ್ತು ಹಿಜಾಬ್​​ ಫೈಟ್​​​

*ಹಿಜಾಬ್​ ವಿವಾದಕ್ಕೆ ಮಂಗಳೂರು ವಿವಿಯಲ್ಲಿ ಹೆಚ್ಚಿದ ಬಿಸಿ
*ಹಿಜಾಬ್​​ ವಿರೋಧಿಸಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು
*ಹಿಜಾಬ್​​​​​​ ಗದ್ದಲಕ್ಕೆ ಸಿದ್ಧವಾಗಿದೆಯಾ ಮತ್ತೊಂದು ತಂಡ..?

First Published May 28, 2022, 8:53 PM IST | Last Updated May 28, 2022, 9:21 PM IST

ಮಂಗಳೂರು (ಮೇ 28): ಕರಾಳಿಯಲ್ಲಿ ಮತ್ತೆ ಹಿಜಾಬ್​​​​​ ವಿವಾದ (Hijab Row) ಭುಗಿಲೆದ್ದಿದೆ. ಶಾಲಾ-ಕಾಲೇಜುಗಳ ಜೊತೆ ಜೊತೆಗೆ ಹಿಜಾಬ್​​​​​​ ವಿವಾದ ಕೂಡ ಮತ್ತೊಮ್ಮೆ ಶುರುವಾಗಿದೆ. ಈ ಹಿಂದೆ ಉಡುಪಿಯಲ್ಲಿ (Udupi) ಆರಂಭವಾಗಿ, ಹೈಕೋರ್ಟ್​​​ ತೀರ್ಪಿನ ನಂತರ ತಣ್ಣಗಾಗಿದ್ದ ವಿವಾದ ಈಗ ಮಂಗಳೂರಿನ (Mangaluru) ಡಿಗ್ರಿ ಕಾಲೇಜ್​​​​​​ವೊಂದಲ್ಲಿಹುಟ್ಟಿಕೊಂಡಿದೆ. ಈ ಹಿಜಾಬ್​​ ಗಲಾಟೆ ಮೊದಕಲು ಆರಂಭವಾಗಿದ್ದು ಉಡಪಿಯ ಸರ್ಕಾರಿ​ ಪಿಯು ಕಾಲೇಜಿನಲ್ಲಿ. ಇಲ್ಲಿ ಆರಂಭವಾಗಿ, ರಾಜ್ಯ-ದೇಶ ಅಷ್ಟೆ ಅಲ್ಲದೆ, ಈ ವಿವಾದ ವಿಶ್ವ ಮಟ್ಟದಲ್ಲೂ ಸದ್ದು ಮಾಡಿತ್ತು. 

ಇದನ್ನೂ ಓದಿ: Hijab ban; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

ಉಡುಪಿಯಲ್ಲಿ ಚಿಕ್ಕದಾಗಿ ಶುರುವಾದ ಗಲಾಟೆ, ಕಣ್ಮುಚ್ಚಿ ತೆಗೆಯೋದ್ರಲ್ಲಿ ದೇಶಾದ್ಯಂತ ವ್ಯಾಪಿಸಿತ್ತು. ಇದರ ಹಿಂದೆ ಕಾಣದ ಬಲಾಢ್ಯ ಕೈಗಳಿವೆ ಎಂದು ಹೇಳಲಾಗ್ತಿತ್ತು. ಒಟ್ಟಿನಲ್ಲಿ ಈ ಗಲಾಟೆ ಶುರುವಾಗಿ ಕೋರ್ಟ್​​​​​ ತೀರ್ಪು​​​ ಬರುವವರೆಗೂ, ಹಿಜಾಬ್​​ ಗಲಾಟೆ ಇಡೀ ದೇಶವನ್ನೇ ಹೊತ್ತಿ ಉರಿಸಿತ್ತು. ಉಡುಪಿಯಲ್ಲಿ ಶುರುವಾಗಿದ್ದ ಹಿಜಾಬ್​ ಗಲಾಟೆ, ಹೈಕೋರ್ಟ್​ ತೀರ್ಪಿನ ನಂತರ ತಣ್ಣಗಾಗಿತ್ತು. ಆದರೆ ಅಂದು ಉಡುಪಿಯಲ್ಲಿ ಆರಂಭವಾಗಿದ್ದ ಹಿಜಾಬ್​​ ವಿವಾದ, ಒಂದಿಷ್ಟು ದಿನಗಳ ನಂತರ ಮತ್ತೆ ಮಂಗಳೂರಿನಲ್ಲಿ ಶುರುವಾಗಿದೆ.  ವಿವಾದ ಕುರಿತ ಒಂದು ಕಂಪ್ಲೀಟ್​​ ರಿಪೋರ್ಟ್​​​​​​ ಈ ಸ್ಪೆಷಲ್​ ಎಪಿಸೋಡ್​​​​​ನಲ್ಲಿ