Asianet Suvarna News Asianet Suvarna News

ದೇಶಾದ್ಯಂತ ನಾಳೆ ಲಾಕ್‌ಡೌನ್ 3.0 ಅಂತ್ಯ; ಬಸ್, ಮೆಟ್ರೋ ಕ್ಲಿನಿಕ್, ಸಲೂನ್ ಆರಂಭ?

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಯಲ್ಲಿರುವ 3 ನೇ ಹಂತದ ಲಾಕ್‌ಡೌನ್ ಭಾನುವಾರ ಕೊನೆಗೊಳ್ಳಲಿದ್ದು ಸೋಮವಾರದಿಂದ  ಲಾಕ್‌ಡೌನ್ 4.0 ಜಾರಿಯಾಗಲಿದೆ.  ಹೊಸ ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಬಹುತೇಕ ಇಂದೇ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 
 

First Published May 16, 2020, 11:41 AM IST | Last Updated May 16, 2020, 11:41 AM IST

ಬೆಂಗಳೂರು (ಮೇ. 16): ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಯಲ್ಲಿರುವ 3 ನೇ ಹಂತದ ಲಾಕ್‌ಡೌನ್ ಭಾನುವಾರ ಕೊನೆಗೊಳ್ಳಲಿದ್ದು ಸೋಮವಾರದಿಂದ  ಲಾಕ್‌ಡೌನ್ 4.0 ಜಾರಿಯಾಗಲಿದೆ.  ಹೊಸ ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಬಹುತೇಕ ಇಂದೇ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

ಲಾಕ್‌ಡೌನ್‌: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'.

ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ವಿಸ್ತರಣೆ ಮಾಡಿ ಹಸಿರು ವಲಯದಲ್ಲಿ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿ ಕಿತ್ತಳೆ ವಲಯದಲ್ಲಿ ಸೀಮಿತ ನಿರ್ಬಂಧ ಮುಂದುವರೆಸುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!