Hijab Row: ಕೋರ್ಟ್‌ ಆದೇಶ ಪಾಲಿಸಿ, ವಿದ್ಯಾರ್ಥಿಗಳಿಗೆ ಹಿಂದೂ-ಮುಸ್ಲಿಂ ಧರ್ಮಗುರುಗಳ ಕರೆ

ಹಿಜಾಬ್‌ ವಿವಾದಕ್ಕೆ (Hijab Row)  ಸಂಬಂಧಪಟ್ಟಂತೆ ಹೈಕೋರ್ಟ್‌ (High Court) ಆದೇಶಕ್ಕೆ ಬದ್ಧರಾಗಬೇಕು. ತನ್ಮೂಲಕ ಸಮಾಜದಲ್ಲಿ ಸಾಮರಸ್ಯ, ಶಾಂತಿ ಕಾಪಾಡಬೇಕು ಎಂದು ರಾಜ್ಯದ ಎಲ್ಲ ಧಾರ್ಮಿಕ ಗುರುಗಳು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
 

First Published Feb 20, 2022, 3:46 PM IST | Last Updated Feb 20, 2022, 3:46 PM IST

ಬೆಂಗಳೂರು (ಫೆ. 20): ಹಿಜಾಬ್‌ ವಿವಾದಕ್ಕೆ (Hijab Row)  ಸಂಬಂಧಪಟ್ಟಂತೆ ಹೈಕೋರ್ಟ್‌ (High Court) ಆದೇಶಕ್ಕೆ ಬದ್ಧರಾಗಬೇಕು. ತನ್ಮೂಲಕ ಸಮಾಜದಲ್ಲಿ ಸಾಮರಸ್ಯ, ಶಾಂತಿ ಕಾಪಾಡಬೇಕು ಎಂದು ರಾಜ್ಯದ ಎಲ್ಲ ಧಾರ್ಮಿಕ ಗುರುಗಳು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

Hijab Row: ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗಬಾರದು: ಮುರುಘ ಶ್ರೀ ಕಿವಿ ಮಾತು

ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಎಲ್ಲ ಧಾರ್ಮಿಕ ಗುರುಗಳು ಮಾತನಾಡಿ ಹಿಜಾಬ್‌ ವಿವಾದದಿಂದಾಗಿ ಸಮಾಜದಲ್ಲಿ ಶಾಂತಿಗೆ ಭಂಗ ಬಂದಿದ್ದು, ಸಮಾಜದಲ್ಲಿ ಸಾಮರಸ್ಯ ಬಹಳ ಮುಖ್ಯವಾಗಿದೆ ಎಂದು ಹೇಳಿ, ಪರೋಕ್ಷವಾಗಿ ಸಮವಸ್ತ್ರ ಕುರಿತಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶ ಪಾಲಿಸಬೇಕು ಎಂದು ಹೇಳಿ, ಇದು ಧಾರ್ಮಿಕ ನಂಬಿಕೆಯ ವಿಷಯವಾಗಿದ್ದು, ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದರು.

ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ರಾಷ್ಟ್ರೀಯ ಸಹಾಯಕ ಪ್ರಧಾನ ಕಾರ್ಯದರ್ಶಿ ಮೌಲಾನ ಸುಲೇಮಾನ್‌ ಖಾನ್‌ ಅವರು ಮಾತನಾಡಿ, ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಯಾವ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆಯೋ ಅಂತಹ ಕಾಲೇಜುಗಳ ತರಗತಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಬೇಕು ಎಂದು ಹೇಳಿದರು.

 

Video Top Stories