Asianet Suvarna News Asianet Suvarna News

Hijab Row ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗಬಾರದು: ಮುರುಘ ಶ್ರೀ ಕಿವಿ ಮಾತು

ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್‌ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್‌ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ. ಇನ್ನು ಈ ಬಗ್ಗೆ ಮುರುಘ ಶ್ರೀ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಮಹತ್ವದ ಹೇಳಿಕೆಯನ್ನಯ ಕೊಟ್ಟಿದ್ದಾರೆ.

First Published Feb 19, 2022, 5:30 PM IST | Last Updated Feb 19, 2022, 5:30 PM IST

ಬೆಂಗಳೂರು, (ಫೆ.19): ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದದ ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ.  ಇನ್ನು ಹಿಜಾಬ್‌ ವಿವಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.  

Hijab Row: ಹೈಕೋರ್ಟ್ ಆದೇಶ ಪಾಲಿಸಬೇಕು, ಹೊರಗಿನವರಿಂದಲೇ ವಿವಾದ ಹೆಚ್ಚಾಗುತ್ತಿದೆ: ಸಿಎಂ

ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್‌ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್‌ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ.

ಇನ್ನು ಈ ಬಗ್ಗೆ ಮುರುಘ ಶ್ರೀ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿದ್ದು, ಸಂವಿಧಾನ ನಮಗೆ ಎಲ್ಲಾ ಕೊಟ್ಟಿದೆ. .ಹೈಕೋರ್ಟ್‌ ತೀರ್ಪಿನ ಮೇಲೆ ಎಲ್ಲ ನಿಮತಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗಬಾರದು ಎಂದು ಕಿವಿ ಮಾತು ಹೇಳಿದರು.