ಕನ್ನಂಬಾಡಿ ಕದನಕ್ಕೆ ಎಚ್‌ಡಿಕೆ ಬ್ರೇಕ್, ಏನ್ಮಾಡ್ತಾರೆ ಸುಮಲತಾ..?

- ಸುಮಲತಾ ಜತೆ ಸಮರಕ್ಕೆ ಎಚ್‌ಡಿಕೆ ಬ್ರೇಕ್‌

- ಮಾಡಬೇಕಾದ ಕೆಲಸ ಸಾಕಷ್ಟಿವೆ, ಬೇರೆ ವಿಷಯ ಉಪೇಕ್ಷಿಸೋಣ

- ನಮ್ಮ ಮೇಲಿನ ಆರೋಪ ಜನರ ತೀರ್ಮಾನಕ್ಕೆ ಬಿಡೋಣ: ಕುಮಾರಸ್ವಾಮಿ

First Published Jul 11, 2021, 11:16 AM IST | Last Updated Jul 11, 2021, 11:16 AM IST

ಬೆಂಗಳೂರು (ಜು. 11): ಕೆಆರ್‌ಎಸ್‌ ಜಲಾಶಯದ ಸುರಕ್ಷತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಷ್‌ ಜತೆಗಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕದನ ವಿರಾಮ ಘೋಷಣೆ ಮಾಡಿದ್ದಾರೆ.

'ಜನ ಮಾತಾಡುತ್ತಾರೆ, ಎಚ್‌ಡಿಕೆ ಕೇಳಿಸಿಕೊಳ್ಳಬೇಕಾಗುತ್ತದೆ' ಮುಗಿಯದ ಕನ್ನಂಬಾಡಿ ಕದನ

ಪಕ್ಷದ ಬಲವರ್ಧನೆಗೆ ಗಮನ ಹರಿಸಬೇಕಾದ ಕೆಲಸಗಳು ಬೇರೆಯದೇ ಇವೆ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂದಿದ್ದಾರೆ. ಎಚ್‌ಡಿಕೆ ಈ ನಿರ್ಧಾರಕ್ಕೆ, ವಿವಾದವನ್ನು ಶುರು ಮಾಡಿದ್ದೇ ಅವರು, ಈಗ ಅವರೇ ಅಂತ್ಯ ಮಾಡುತ್ತೇನೆ ಎಂದರೆ ಸಂತೋಷ. ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ.